ಗೋಣಿಕೊಪ್ಪಲು, ಸೆ. 13: ಪೊಲೀಸ್ ಸಿಬ್ಬಂದಿಗಳು ತಮ್ಮ ಠಾಣೆಗಳಲ್ಲಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಹಿರಿಯ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಯಾಗುತ್ತದೆ ಎಂದು ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಸಿ.ಟಿ. ಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಣಿಕೊಪ್ಪಲುವಿನ ಹೊಟೇಲ್ ಪ್ರಕಾಶ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಮುಂಬಡ್ತಿ ಪಡೆದ ಪೊಲೀಸ್ ಅಧಿಕಾರಿಗಳಿಗೆ ಗೌರವ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಗೋಣಿಕೊಪ್ಪಲು, ಸೆ. 13: ಪೊಲೀಸ್ ಸಿಬ್ಬಂದಿಗಳು ತಮ್ಮ ಠಾಣೆಗಳಲ್ಲಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಹಿರಿಯ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಯಾಗುತ್ತದೆ ಎಂದು ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಸಿ.ಟಿ. ಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಣಿಕೊಪ್ಪಲುವಿನ ಹೊಟೇಲ್ ಪ್ರಕಾಶ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಮುಂಬಡ್ತಿ ಪಡೆದ ಪೊಲೀಸ್ ಅಧಿಕಾರಿಗಳಿಗೆ ಗೌರವ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಆರ್. ಮಂಚಯ್ಯ, ಕೊಡಗು ಜಿಲ್ಲಾ ಚೇಂಬರ್‍ನ ಅಧ್ಯಕ್ಷ ಬಿ.ಎನ್. ಪ್ರಕಾಶ್, ಪೊಲೀಸ್ ಸಿಬ್ಬಂದಿ ದೇವರಾಜ್ ಎಎಸ್‍ಐ ಮೇದಪ್ಪ ಮಾತನಾಡಿದರು. ಪೊಲೀಸ್ ಅಧಿಕಾರಿಗಳಾದ ಗಣಪತಿ, ಚಂದ್ರಯ್ಯ, ಪೊಲೀಸ್ ಸಿಬ್ಬಂದಿ ವರ್ಗದ ಮಂಜು ಶಾಲಿಯನ್, ಪುಟ್ಟರಾಜು, ಮಜೀದ್, ಕಾಫಿ ಬೆಳೆಗಾರರಾದ ರಮೇಶ್, ಸುಳ್ಳಿಮಾಡ ದೀಪಕ್ ಹಾಜರಿದ್ದರು. ಠಾಣೆಯ ಸಿಬ್ಬಂದಿ ಶೋಭಾ ಪ್ರಾರ್ಥಿಸಿದರು. ಎಂ.ಕೆ. ಪೂವಣ್ಣ ಸ್ವಾಗತಿಸಿ, ಪಿ.ಎಸ್.ಐ. ಆರ್. ಮಂಚಯ್ಯ ವಂದಿಸಿದರು.