ಸುಂಟಿಕೊಪ್ಪ, 13: ಇಲ್ಲಿಗೆ ಸಮೀಪದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ತೋಟಕ್ಕೆ ಕಾಡಾನೆಗಳ ದಾಳಿಯಿಂದ ಅಪಾರ ಬೆಳೆ ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.
ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು,ಕಾಫಿ üಅರಶಿಣ ಬಾಳೆ ತೋಟಗಳನ್ನು ದ್ವಂಸಗೊಳಿಸಿ 40 ಸಾವಿರಕ್ಕೂ ಮೇಲ್ಪಟ್ಟು ನಷ್ಟಪಡಿಸಿವೆ. ಎಂದು ತೋಟದ ಮಾಲೀಕ ಕೋರನ ಶಶಿಧರ್ ಅಳಲು ತೋಡಿಕೊಂಡಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೆ ಆನೆಗಳು ಕಂಡುಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಅಂಜುತ್ತಿದ್ದು ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯಪಡುತ್ತಿದ್ದಾರೆ. ರಾತ್ರಿ ವೇಳೆ ಸುಂಟಿಕೊಪ್ಪದಿಂದ ಚೆಟ್ಟಳಿ ಕಡೆಗೆ ಹಲವಾರು ವಾಹನಗಳು ಸಂಚರಿಸುತಿದ್ದು ಪ್ರಯಾಣಿಕರಿಗೆ ಆನೆ ಉಪಟಳದಿಂದ ತೊಂದರೆ ತಪ್ಪಿದಲ್ಲ ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಒತ್ತಾಯಿಸಿದ್ದಾರೆ.