ಪೆರಾಜೆ, ಸೆ.14: ನಮ್ಮ ಹಿರಿಯರ ತ್ಯಾಗ ಬಲಿದಾನದ ಫಲವಾಗಿ ಇವತ್ತು ಹಳ್ಳಿಯಿಂದ ಡೆಲ್ಲಿಯವರೆಗೂ ಕೂಡ ಇಡೀ ದೇಶ ಮೆಚ್ಚುವಂತಹ ಆಡಳಿತವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವದು ಹೆಮ್ಮೆಯ ಸಂಗತಿ ಎಂದು ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಹೇಳಿದರು. ಅವರು ಪೆರಾಜೆ ಬಿಜೆಪಿ ಗ್ರಾಮ ಸಮಿತಿಯ ವತಿಯಿಂದ ಆಯೋಜನೆಗೊಂಡ ಕೇಂದ್ರ ಸರ್ಕಾರದ ನೂರು ದಿನದ ಆಡಳಿತದ ಸಂಭ್ರಮ ಆಚರಣೆಯಲ್ಲಿ ಮಾತನಾಡುತ್ತಾ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು, ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿ, ಅದರ ಉಪಯೋಗ ಜನರಿಗೆ ತಲಪುವಂತೆ ಮಾಡಿದ್ದಾಗ ಮಾತ್ರ ಯೋಜನೆಗೆ ಸೂಕ್ತ ನ್ಯಾಯ ಒದಗಿಸಿದ ಹಾಗೆ ಆಗುತ್ತದೆ, ಈ ನಿಟ್ಟಿನಲ್ಲಿ ಕೈಜೋಡಿಸಿ ದೇಶದ ಅಭಿವೃದ್ಧಿಗಾಗಿ ಸಹಕರಿಸಿ, ನಮ್ಮ ಹಿರಿಯರ, ಶ್ರಮ ತ್ಯಾಗ ಬಲಿದಾನಕ್ಕೆ ಸೂಕ್ತ ನ್ಯಾಯ ಒದಗಿಸೋಣ ಎಂದು ಕರೆ ನೀಡಿದರು.

ಈ ವೇಳೆ ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಹಾಗೂ ಇನ್ನೂ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಸಿ ಶಾಸಕರ ಗಮನಕ್ಕೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು.

ವೇದಿಕೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಮೋನಪ್ಪ ಕುಂಬಳಚೇರಿ, ಪಂಚಾಯತ್ ಅಧ್ಯಕೆÀ್ಷ ಜಯಲಕ್ಷ್ಮಿ, ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ, ಪಂಚಾಯತ್ ಸದಸ್ಯರು, ಪೆರಾಜೆ ಕೃಷಿಪತ್ತಿನ ನಿರ್ದೇಶಕರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ಸ್ವಾಗತಿಸಿ, ಯುವಮೋರ್ಚಾ ಅಧ್ಯಕ್ಷ ಪ್ರವೀಣ್ ಮಜಿಕೋಡಿ ವಂದಿಸಿದರು.