ವೀರಾಜಪೇಟೆ, ಸೆ. 14: ವಿಜ್ಞಾನ ತಂತ್ರಜ್ಞಾನದಿಂದ ಪ್ರಪಂಚವನ್ನೇ ತೋರಿಸುತ್ತದೆ, ಮನುಷ್ಯನು ಉತ್ತಮವಾದ ಜೀವನ ಸಾಗಿಸಲು ಧಾರ್ಮಿಕ ಮನೋಭಾವನೆಗಳು ಸಮಾಜಕ್ಕೆ ಒಳಿತಾಗಲಿದೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ವೀರಾಜಪೇಟೆ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾದ ಶ್ರೀ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ಸಾಹಿತಿ ಹಾಗೂ ದಾನಿಗಳಾದ ಮಣಿಕ್ಕಾರ ಗೋಪಾಲ ಕೃಷ್ಣ ಶ್ಯಾನುಭಾಗ್ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಧರ್ಮ ಹಾಗೂ ಆಧ್ಯಾತ್ಮಿಕ ದೊರಕುವಂತಾಗಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ಮಂಜೇಶ್ವರದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ಅವರು ಸಭೆಯನ್ನು ದ್ದೇಶಿಸಿ ಮಾತನಾಡಿದರು.
ಉತ್ಸವ ಸಮಿತಿಯ ಎನ್. ರವಿಂದ್ರನಾಥ್ ಕಾಮತ್ ಪ್ರಸ್ತಾವಿಕವಾಗಿ ಮಾತನಾಡಿದರು. ಬಸವೇಶ್ವರ ದೇವಾಲಯದ ಅಧ್ಯಕ್ಷ ಎನ್.ಜಿ. ಕಾಮತ್ ಸಭೆಯನ್ನುದ್ದೇಶಿಸಿ ಮಾತನಾಡಿ, ದೇವಾಲಯಕ್ಕೆ ಮುಖ್ಯ ದ್ವಾರವನ್ನು ನೀಡಿದ ಮಣಿಕ್ಕಾರ್ ಗೋಪಾಲಕೃಷ್ಣ ಶಾನುಭಾಗ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ಎ.ಸಿ. ಜೋಸೆಫ್, ಕೆ.ಪಿ. ರಶೀದ್, ವಿನೋದ್ ಥರ್ಮಲ್ ಹಾಗೂ ದಿಲೀಪ್ ಅವರುಗಳು ಉಪಸ್ಥಿತರಿದ್ದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಬೆಂಗಳೂರಿನ ಎನ್. ವೆಂಕಟೇಶ ಕಾಮತ್ ಹಾಗೂ ವೀರಾಜಪೇಟೆ ವೈಷ್ಣವಿ ಅವರಿಗೆ ಸಹಾಯಧನ ನೀಡಿ ಗೌರವಿಸಿದರು.
ವಕೀಲ ರವೀಂದ್ರನಾಥ್ ಕಾಮತ್ ಸ್ವಾಗತಿಸಿದರೆ, ನರೇಂದ್ರ ಕಾಮತ್ ವಂದಿಸಿದರು. ತರಿಕೇರಿಯ ಗೀತಾಂಜಲಿ ತಂಡದವರಿಂದ ರಸಮಂಜರಿ ನಡೆಯಿತು.