ಮಡಿಕೇರಿ, ಸೆ. 14: ಕೊಡಗಿನ ಆದಿ ಕವಿ ಹರದಾಸ ಅಪ್ಪಚ್ಚ ಕವಿ ಅವರು ಹುಟ್ಟಿ ತಾ. 21 ಕ್ಕೆ 151 ವರ್ಷ ತುಂಬಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಡ್ಡಂಡ ಕಾರ್ಯಪ್ಪ ರಚಿಸಿರುವ ಕವಿಯ ಬದುಕು-ಬರಹ ಕೃತಿ ‘ಹರದಾಸ ಅಪ್ಪಚ್ಚ ಕವಿ’ಯನ್ನು ಪ್ರಕಟಿಸಿದೆ. ಇದು ಭಾರತೀಯ ಏಳು ಭಾಷೆಗಳಲ್ಲಿ ಪ್ರಕಟಗೊಳ್ಳಲಿದೆ.
ಕನ್ನಡ ಕೃತಿ ಮೈಸೂರಿನ ರಂಗಕರ್ಮಿ ಮಂಡ್ಯ ರಮೇಶ್ರ ‘ನಟನ ರಂಗಶಾಲೆ’ಯಲ್ಲಿ ತಾ. 21 ರಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಮೈಸೂರಿನ ಸಾಹಿತ್ಯ-ಸಂಸ್ಕೃತಿ ಚಿಂತಕ ಡಾ. ಆದೇಂಗಡ ಕುಟ್ಟಪ್ಪ ಅವರು ಕೃತಿ ಬಿಡುಗಡೆ ಮಾಡಲ್ಲಿದ್ದು, ಕಲಾವಿದ ನೆಲ್ಲಮಕ್ಕಡ ಕಾವೇರಪ್ಪ ಉಪನ್ಯಾಸ ನೀಡಲ್ಲಿದ್ದಾರೆ. ಸಂಜೆ 6.30ಕ್ಕೆ ರಂಗಭೂಮಿ ಪ್ರತಿಷ್ಠಾನ ಕೊಡಗು ತಂಡದಿಂದ ಕೊಡವ ನಾಟಕ ‘ಬದ್ಕ್’ ಪ್ರದರ್ಶನಗೊಳ್ಳಲಿದೆ.
ಅಪ್ಪಚ ಕವಿ ಹುಟ್ಟಿದ ದಿನವನ್ನು “ಕೊಡವ ತಕ್ಕ್-ಸಾಹಿತ್ಯ ದಿನ’“ (ಸೆಪ್ಟೆಂಬರ್ 21) ಎಂದು ಆಚರಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎ.ಸಿ. ಕಾರ್ಯಪ್ಪ ತಿಳಿಸಿದ್ದಾರೆ.