ಶನಿವಾರಸಂತೆ, ಸೆ. 12: ಶನಿವಾರಸಂತೆ ಲಯನ್ಸ್ ಕ್ಲಬ್ ಹುಣಸೂರು ಕಾವೇರಿ ಸಂಭ್ರಮದ ಸಂಸ್ಥೆಯ ಕಚೇರಿಯಲ್ಲಿ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ಶಿಕ್ಷಕರ ದಿನಾಚರಣೆಯಂದು ರಾಜ್ಯ ಪ್ರಶಸ್ತಿ ಪಡೆದ ಮುಳ್ಳೂರು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್. ಸತೀಶ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಶಿಕ್ಷಕರ ದಿನಾಚರಣೆಯ ಬಗ್ಗೆ ಲಯನ್ಸ್ ಸದಸ್ಯ ಎಂ.ಆರ್. ಮಲ್ಲೇಶ್, ಕಾರ್ಯದರ್ಶಿ ಎಂ.ಆರ್. ನಿರಂಜನ್ ಹಾಗೂ ನಿಡ್ತ ಪ್ರೌಢಶಾಲೆಯ ಶಿಕ್ಷಕ ದೀಪಕ್ ಮಾತನಾಡಿದರು. ಲಯನ್ಸ್ ಖಜಾಂಚಿ ಬಿ.ಕೆ. ಚಿಣ್ಣಪ್ಪ, ಲಯನ್ಸ್ ಕ್ಲಬ್‍ನ ಉಪಾಧ್ಯಕ್ಷರುಗಳಾದ ಬಿ.ಸಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಕೆ.ಎನ್. ಕಾರ್ಯಪ್ಪ, ಕೆ.ಎಂ. ಜಗನ್‍ಪಾಲ್, ಎಸ್.ಜಿ. ನರೇಶ್‍ಚಂದ್ರ, ಟಿ.ಆರ್. ಕೇಶವ, ಎಂ.ಎನ್. ಶಂಕರ್, ಎನ್.ಎಂ. ಲಿಂಗರಾಜ್, ಜಿ.ಪಿ. ಪುಟ್ಟಪ್ಪ, ಸಿ.ಪಿ. ಹರೀಶ್, ಎನ್.ಕೆ. ಕುಶಾಲಪ್ಪ, ಪರಮೇಶ್ ಉಪಸ್ಥಿತರಿದ್ದರು. ಜಿ.ಪಿ. ಪುಟ್ಟಪ್ಪ ಧ್ವಜವಂದನೆ ಮಾಡಿದರೆ, ನಿರಂಜನ್ ಸ್ವಾಗತಿಸಿ, ಬಿ.ಕೆ. ಚಿಣ್ಣಪ್ಪ ವಂದಿಸಿದರು.