ಮಡಿಕೇರಿ, ಸೆ.12: ಇತಿಹಾಸ ಪ್ರಸಿದ್ಧ ನಾಡಹಬ್ಬ ಮಡಿಕೇರಿ ದಸರಾ ಉತ್ಸವ ಅಂಗವಾಗಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ವರ್ಷಂಪ್ರತಿ ಏರ್ಪಡಿಸಿಕೊಂಡು ಬರಲಾಗುತ್ತಿರುವ ಬಹುಭಾಷಾ ಕವಿಗೋಷ್ಠಿಗೆ ಕವಿ -ಕವಯತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ.
ನಾಡಹಬ್ಬದಲ್ಲಿ ಸಾಹಿತ್ಯ ಕ್ಷೇತ್ರಕ್ಕೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾ ಗಿದ್ದು, ರಾಷ್ಟ್ರ, ನಾಡು-ನುಡಿ, ಸಂಸ್ಕøತಿ, ಕಲೆ, ಆಚಾರ-ವಿಚಾರ, ಪ್ರಕೃತಿ-ಪರಿಸರಗಳನ್ನೊಳ ಗೊಂಡಂತೆ ಮಡಿಕೇರಿ ದಸರಾ ಮಹೋತ್ಸವದ ಸಾರಗಳನ್ನು ಬಿಂಬಿಸುವ ಸ್ವ-ರಚಿತ ಕವನಗಳನ್ನು ಕಳುಹಿಸಿಕೊಡ ಬಹುದಾಗಿದೆ.
ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಕವಿಗಳು ತಮ್ಮ ಮಾತೃ ಭಾಷೆಗಳಲ್ಲೂ ಕವನ ರಚಿಸಬಹು ದಾಗಿದ್ದು, ಓರ್ವ ಕವಿಗೆ ಒಂದು ಕವನ ಕಳುಹಿಸಲು ಮಾತ್ರ ಅವಕಾಶವಿದೆ.
ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದ್ದು, ಕವನಗಳು ಇಪ್ಪತ್ತು ಸಾಲುಗಳಿಗೆ ಮೀರದಂತಿರ ಬೇಕು. ಹೊಸ ಕವಿ-ಕವಯತ್ರಿಯರಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿ ಸಲಾಗಿದ್ದು, ಆಯ್ಕೆ ಸಮಿತಿಯ ತೀರ್ಮಾನ ಅಂತಿಮವಾಗಿರುತ್ತದೆ. ಎಲ್ಲ್ಲಿಯೂ ಪ್ರಕಟವಾಗಿರದ, ವಾಚಿಸದಿರುವ ಕವನಗಳನ್ನು ತಾ. 20ರ ಒಳಗಡೆ ಚಿ.ನಾ. ಸೋಮೇಶ್, ಅಧ್ಯಕ್ಷರು, ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಶಕ್ತಿ ದಿನಪತ್ರಿಕೆ ಕೈಗಾರಿಕಾ ಬಡಾವಣೆ ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಮೊ. 9972538584, 9449475632 ಸಂಪರ್ಕಿಸಬಹುದಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.