ಕೂಡಿಗೆ, ಸೆ. 12: ಹಳದಿ ಮತ್ತು ಕುಂಕುಮ ಬಣ್ಣವು ಏಳು ಕೋಟಿ ಕನ್ನಡಿಗರ ಮನಸಿನ ಬಣ್ಣ ವಾಗಿರುತ್ತದೆ. ಇದು ಸರ್ಕಾರದಿಂದ ಕನ್ನಡ ಬಾವುಟ ಎಂದು ಅಧಿಕೃತವಾಗಿಲ್ಲದ್ದರೂ ಸರ್ವ ಕನ್ನಡಿಗರು ಕನ್ನಡ ಬಾವುಟವೆಂದೇ ಮಾನಸಿಕವಾಗಿ ತೀರ್ಮಾನಿಸಿರುತ್ತಾರೆ. ಕನ್ನಡಿಗರ ಕನ್ನಡ ನಾಡು, ನುಡಿಯ ಲಾಂಚನವಾಗಿರುತ್ತದೆ. ಇದು ಕನ್ನಡ, ಕನ್ನಡಿಗರ, ಕನ್ನಡನಾಡಿನ ಅಭಿವೃದ್ದಿಗಾಗಿ ಬಳಸುವಂತಹ ಲಾಂಚನವನ್ನು ಇಂದು ಕೆಲವು ಸಂಘ, ಸಂಸ್ಥೆಗಳು ವೈಯಕ್ತಿಕ ವಿಚಾರಕ್ಕೆ ದುರ್ಬಳಕೆ ಮಾಡುತ್ತಿರುವದನ್ನು ಕನ್ನಡ ಸಾಹಿತ್ಯ ಪರಿಷತಿನ ಅಧ್ಯಕ್ಷ ಲೋಕೇಶ್ ಸಾಗರ್ ಖಂಡಿಸಿದ್ದಾರೆ. ಈ ಬಾವುಟವು ಯಾವದೇ ವ್ಯಕ್ತಿಯ ವೈಯಕ್ತಿಕ ವಿಚಾರಕ್ಕಾಗಲೀ, ಸಮುದಾಯದ ವಸ್ತುವಾಗಿರುವದಿಲ್ಲ. ಸರ್ವ ಕನ್ನಡಿಗರು ಸ್ವೀಕರಿಸಿರುವ ಹೃದಯದ ಬಣ್ಣವಿದು. ಈ ಬಾವುಟವನ್ನು ದುರ್ಬಳಕೆ ಮಾಡುವವರ ವಿರುದ್ಧವೇ ಕನ್ನಡ ಬಾವುಟಗಳು ಮುಂದೆ ಪ್ರತಿಭಟಿಸುವ ಸಂದರ್ಭ ಬರಲಿದೆ ಎಂದು ಲೋಕೇಶ್ ಸಾಗರ್ ಎಚ್ಚರಿಸಿದ್ದಾರೆ.