ಮಡಿಕೇರಿ, ಸೆ. 10: ದಿ. ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗದ ವತಿಯಿಂದ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ವಿ.ಪಿ. ಶಶಿಧರ್ ಮಾತನಾಡಿ, ವಂಚಿತರ ಪರವಾಗಿ ಸುಬ್ಬಯ್ಯ ಅವರು ಹೋರಾಟಗಳನ್ನು ಮಾಡುತ್ತಿದ್ದರು ಎಂದು ಹೇಳಿದರು.

ವಕೀಲ ಕೆ.ಆರ್. ವಿದ್ಯಾಧರ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್, ಹೋರಾಟಗಾರ ನಿರ್ವಾಣಪ್ಪ, ಮತ್ತೋರ್ವ ಹೋರಾಟಗಾರ ರಾಜು, ಅಲ್ಲಾರಂಡ ವಿಠಲ ನಂಜಪ್ಪ, ಬಿ.ಎನ್. ಮನುಶೆಣೈ, ಜಯಪ್ಪ ಹಾನಗಲ್ ಹಾಗೂ ನಂಜುಂಡ ಸ್ವಾಮಿ ಮುಂತಾದವರು ಮಾತನಾಡಿದರು.