ಮಡಿಕೇರಿ, ಸೆ. 11: ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುಲ್ಲಂಗಡ ಚಿಣ್ಣಪ್ಪ ಜ್ಞಾಪಕಾರ್ಥ ರೋಲಿಂಗ್ ಟ್ರೋಫಿ ಮಹಿಳೆಯರ ಹಾಕಿ ಪಂದ್ಯಾಟ 2019-20 ನ್ನು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವತಿಯಿಂದ ತಾ.14-15 ರಂದು ಆಯೋಜಿಸಲಾಗಿದ್ದು, ಸಾಯಿ ಹಾಕಿ ಮೈದಾನದಲ್ಲಿ ನಡೆಯಲಿದೆ.
ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬೇರೆ ಬೇರೆ ಕಾಲೇಜಿನ ಸುಮಾರು ಹದಿಮೂರು ತಂಡಗಳು ಭಾಗವಹಿಸಲಿವೆ ಎಂದು ಕಾಲೇಜಿನ ಪ್ರಾಂಶುಪಾಲ ತಿಳಿಸಿದ್ದಾರೆ.