ಸಿದ್ದಾಪುರ, ಸೆ. 10: ನೆಲ್ಯಹುದಿ ಕೇರಿಯ ಬೆಟ್ಟದಕಾಡು ವಿನಲ್ಲಿ ಸಂತ್ರಸ್ತರಿಗೆ ಗುರುತಿಸಿದ್ದ ಒತ್ತುವರಿ ಭೂಮಿ ತೆರವಿಗೆ ತೋಟದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಈ ಬಾರಿಯ ಮಹಾಮಳೆಗೆ ಸಿಲುಕಿ ನೆಲ್ಯಹುದಿಕೇರಿ ವ್ಯಾಪ್ತಿಯ ಕಾವೇರಿ ನದಿ ತೀರದಲ್ಲಿ ನೂರಾರು ಮನೆಗಳು ನೆಲಸಮಗೊಂಡಿದ್ದು, ನೂರಾರು ಮನೆಗಳು ಹಾನಿಗೊಳಗಾಗಿದೆ. ಮನೆ ಕಳೆದುಕೊಂಡ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಶಾಶ್ವತ ಸೂರು ಸಿಗುವವರೆಗೂ ಪರಿಹಾರ ಕೇಂದ್ರದಿಂದ ಕದಲುವದಿಲ್ಲ ಎಂದು ನಿರಾಶ್ರಿತರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಇದಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ನೀಡಿದ ಸಂದರ್ಭ ಶಾಶ್ವತ ಸೂರು ಒದಗಿಸಿಕೊಡುವಂತೆ ಮನವಿ ಮಾಡಿದ್ದರು.

ಇದಾದ ಬಳಿಕ ಜಿಲ್ಲಾಡಳಿತ ತ್ವರಿತ ಗತಿಯಲ್ಲಿ ನೆಲ್ಯಹುದಿಕೇರಿಯ ಬೆಟ್ಟದಕಾಡು ಹಾಗೂ ಬರಡಿಯಲ್ಲಿ ಸರಕಾರಿ ಬೂಮಿಯನ್ನು ಗುರುತಿಸಿ ದ್ದು, ಬೆಟ್ಟದಕಾಡುವಿನ ಸರಕಾರಿ ಜಾಗದ ಸರ್ವೆ ಕಾರ್ಯವನ್ನು ನಡೆಸಿತ್ತು. ಇತ್ತೀಚೆಗೆ ಬೆಟ್ಟದಕಾಡುವಿನ ಸರಕಾರಿ ಜಾಗದ ಗಡಿಯನ್ನು ಗುರುತಿಸುವ ಕಾರ್ಯ ನಡೆಸಿದ್ದು, ಅಲ್ಲಿ ಖಾಸಗಿ ವ್ಯಕ್ತಿಗಳು ತೋಟ ಮಾಡಿದ್ದರು. ತೋಟದ ಮಾಲೀಕರು ಹಾಗೂ ವಕೀಲರು ಸ್ಥಳಕ್ಕಾಗಮಿಸಿ, ಗಿಡಗಳಿಗೆ ಹಾನಿ ಮಾಡದಂತೆ ಮನವಿ ಮಾಡಿಕೊಂಡಿ ದ್ದರು. ಆದರೂ ಆಡಳಿತ ಅಲ್ಲಿ ಕಾಫಿ ತೋಟ ಹಾಗೂ ಮರಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲು ಕಾರ್ಯಾ ಚರಣೆ ನಡೆಸಿತ್ತು. ಇದೀಗ ತೋಟದ ಮಾಲೀಕರು ರಾಜ್ಯ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಜಾಗದ ಮಾಲೀಕರಾದ ಬಾಬು, ಎಲಿಜಬೆತ್ ಕೊರಿಯನ್ ಹಾಗೂ ಅನ್ನಿ ಇವರುಗಳು ಬೆಂಗಳೂರಿನ ಹಿರಿಯ ವಕೀಲ ಧ್ಯಾನ್ ಚಿಣ್ಣಪ್ಪ ಅವರ ಮೂಲಕ ತಡೆಯಾಜ್ಞೆ ತಂದಿದ್ದು, ಜಾಗವನ್ನು ಹಿಂತಿರುಗಿ¸ Àಬೇಕು ಮತ್ತು ನಷ್ಟ ಪರಿಹಾರ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

-ವಾಸು