ವೀರಾಜಪೇಟೆ, ಸೆ.10: ಗ್ರಾಮಾಂತರ ಪ್ರದೇಶದಲ್ಲಿ ಎಲೆಮರೆಯ ಕಾಯಿಯಂತಿರುವ ಕಲಾ ಪ್ರತಿಭೆಗಳಿಗೆ ವಾಯ್ಸ್ ಆಫ್ ವೀರಾಜಪೇಟೆ ಸಂಗೀತ ಸ್ಪರ್ಧೆ ಒಂದು ಉತ್ತಮ ವೇದಿಕೆ ಎಂದು ಸಮಾಜಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ವೀರಾಜಪೇಟೆಯ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಹಾಗೂ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಲಾದ ವಾಯ್ಸ್ ಆಫ್ ವೀರಾಜಪೇಟೆ 2019ರ ಸಂಗೀತ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಕೇತ್ ಮಾತನಾಡಿದರು.
ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ವಕೀಲ ಡಿ.ಸಿ. ಧ್ರುವ ಮಾತನಾಡಿದರು. ಸಮಾರಂಭವನ್ನುದ್ದೇಶಿಸಿ ಉದ್ಯಮಿ ಮಣಿಕಾರ್ ರಾಜೇಶ್ ಶಾನುಭಾಗ್, ಹಿನ್ನೆಲೆ ಗಾಯಕಿ ಸಮನ್ನವಿತಾ ಶರ್ಮ ಮಾತನಾಡಿದರು.
ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆದ ಸಂಗೀತ ಸ್ಪರ್ಧೆ ಸಮಾರಂಭದಲ್ಲಿ ವೆಂಕಟೇಶ್ ಕಾಮತ್ ಟ್ರಸ್ಟ್‍ನ ಎನ್. ರವೀಂದ್ರನಾಥ್ ಕಾಮತ್, ನರೇಂದ್ರ ಕಾಮತ್, ದೇವಸ್ಥಾನದ ಗೌರಿಗಣೇಶ ಉತ್ಸವ ಸಮಿತಿಯ ಜೆ.ಎನ್. ಪುಷ್ಪರಾಜ್ ಸಂಪತ್ ಕುಮಾರ್. ವಿರೇಂದ್ರ ಕಾಮತ್ ಇತರ ಪದಾಧಿಕಾರಿಗಳು ಹಾಜರಿದ್ದರು.