ಪಾಲಿಬೆಟ್ಟ, ಸೆ. 11: ನಿರಂತರ ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದ ಕೃಷಿ ಫಸಲು ನಾಶದೊಂದಿಗೆ ಕಾರ್ಮಿಕರು, ರೈತರು ಕಂಗಾಲಾಗಿರುವ ಪರಿಸ್ಥಿತಿ ಪಾಲಿಬೆಟ್ಟ, ಪಾಲಿಬೆಟ್ಟ, ಸೆ. 11: ನಿರಂತರ ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದ ಕೃಷಿ ಫಸಲು ನಾಶದೊಂದಿಗೆ ಕಾರ್ಮಿಕರು, ರೈತರು ಕಂಗಾಲಾಗಿರುವ ಪರಿಸ್ಥಿತಿ ಪಾಲಿಬೆಟ್ಟ, ಕೃಷಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ರೈತರು ತಾವು ಬೆಳೆದ ಭತ್ತ, ಕಾಫಿ, ತೆಂಗು, ಬಾಳೆ, ಅಡಕೆ ಸೇರಿದಂತೆ ಇತರ ಕೃಷಿ ಫಸಲುಗಳನ್ನು ಕಾಡಾನೆಗಳು ತುಳಿದು, ತಿಂದು ನಾಶ ಮಾಡುವ ಮೂಲಕ ಭಾರೀ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿವೆ.ನಿರಂತರ ಕಾಡಾನೆ ಹಾವಳಿ ಯಿಂದ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು, ಸಾರ್ವಜ ನಿಕರು ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ಹಾಗೂ ಹಾಡಹಗಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಿಂಡಿನ ಭಯದಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ.ಬ್ಯಾಂಕ್ ಹಾಗೂ ಕೈ ಸಾಲ ಮಾಡಿ ಕೃಷಿ ಮಾಡಿದರೂ ಕಾಡಾನೆಗಳು ತುಳಿದು ತಿಂದು ನಾಶ ಮಾಡುವ ಮೂಲಕ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿವೆ. ಇದರಿಂದ
(ಮೊದಲ ಪುಟದಿಂದ) ರೈತರು ಕಂಗಾಲಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಸರಕಾರ ಹಾಗೂ ಅರಣ್ಯ ಇಲಾಖೆ ರೈತರಿಗೆ ಹೆಚ್ಚಿನ ಮೊತ್ತದಲ್ಲಿ ಪರಿಹಾರ ನೀಡುವ ಮೂಲಕ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೃಷಿಕ ಚೌವಂಡ ಕಸ್ತೂರಿ ಹೇಳುತ್ತಾರೆ.
ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ವಿಜು ಸುಬ್ರಮಣಿ, ಕಾಡಾನೆ ದಾಳಿಯಿಂದ ಕೃಷಿ ಫಸಲು ನಾಶಪಡಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ರೈತರೊಂದಿಗೆ ಮಾತುಕತೆ ನಡೆಸಿದ ಅವರು; ಅರಣ್ಯ ಇಲಾಖೆಯಿಂದ ರೈತರ ಕೃಷಿ ಫಸಲು ನಾಶಕ್ಕೆ ಹೆಚ್ಚು ಪರಿಹಾರ ಕೊಡಿಸುವ ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹೊಸೂರು, ಬೆಟ್ಟಗೇರಿ, ಕಳತ್ಮಾಡು, ಬಿಳುಗುಂದ, ಅಮ್ಮತ್ತಿ, ಹೊಸ್ಕೇರಿ ,ಮೇಕೂರು, ಪಾಲಿಬೆಟ್ಟ ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಹಲವು ವರ್ಷಗಳಿಂದ ಬೆಳೆಗಾರರು, ಕಾರ್ಮಿಕರು, ಸಾರ್ವಜನಿಕರು ಸಂಕಷ್ಟಕ್ಕೊಳ ಗಾಗಿದ್ದಾರೆ. ನಿರಂತರ ಕೃಷಿ ಫಸಲು ನಾಶ ಮಾಡುವ ಮೂಲಕ ಕಾಡಾನೆಗಳು ಅಟ್ಟಹಾಸ ಮೆರೆಯುತ್ತಿವೆ. ರೈತರು, ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಅರಣ್ಯ ಇಲಾಖೆ ಯೋಜನೆಗಳನ್ನು ರೂಪಿಸಿ ಸರಕಾರಕ್ಕೆ ಕಳುಹಿಸಬೇಕಾಗಿದೆ; ಛತ್ತೀಸ್ ಗಡ ರಾಜ್ಯದಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಂಡಿರುವ ಮಾದರಿಯಲ್ಲೇ ಜಿಲ್ಲೆಯಲ್ಲೂ ಅನುಸರಿಸ ಬೇಕಾಗಿರುವದರಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಾಶ್ವತ ಯೋಜನೆಯ ಬಗ್ಗೆ ಮನವಿ ಸಲ್ಲಿಸಬೇಕಾಗಿದೆ ಎಂದರು.
ಶಾಸಕ ಕೆ.ಜಿ. ಬೋಪಯ್ಯ ಅವರು ಕಾಡಾನೆ ಹಾವಳಿ ಶಾಶ್ವತ ತಡೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರಗಳು ಶಾಶ್ವತ ಕಾಡಾನೆ ಹಾವಳಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ
ಮಾತನಾಡಿ ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದ್ದು ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ರೈತರು ಬೆಳೆದ ಕೃಷಿ ಫಸಲು ನಾಶವಾಗುತ್ತಿದೆ. ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ವಹಿಸದಿದ್ದಲ್ಲಿ ಬೆಳೆಗಾರರೊಂದಿಗೆ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ. ಸ್ಥಳೀಯರಾದ ನವೀನ್. ಈಶ್ವರ ಸೇರಿದಂತೆ ಮತ್ತಿತರರು ಇದ್ದರು.
-ವರದಿ: ಪುತ್ತಮ್ ಪ್ರದೀಪ್