ನಾಪೋಕ್ಲು, ಸೆ.10: ನಾಪೋಕ್ಲು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಾರ್ಡ್ ಸಭೆಯು ತಾ. 11 ಮತ್ತು 12 ರಂದು ನಡೆಯಲಿದೆ. ಕೊಳಕೇರಿ ವಾರ್ಡ್ ಸಭೆಯು ಹ್ಯಾರಿಸ್ ಅಧ್ಯಕ್ಷತೆಯಲ್ಲಿ ತಾ. 11ರಂದು 10.30 ಗಂಟೆಗೆ ನಡೆಯಲಿದೆ. ಪಶ್ಚಿಮ ಕೊಳಕೇರಿ ವಾರ್ಡ್ ಸಭೆಯು ಅಲ್ಲಿನ ಭಗವತಿ ದೇವಸ್ಥಾನದಲ್ಲಿ ಬೊಟ್ಟೋಳಂಡ ಚಿತ್ರ ಅಧ್ಯಕ್ಷತೆಯಲ್ಲಿ 12 ಗಂಟೆಗೆ ನಡೆಯಲಿದೆ. ಬೇತು ಗ್ರಾಮದ ಧವಸಭಂಡಾರ ಕಟ್ಟಡದಲ್ಲಿ ಎಂ.ಪಿ.ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 3ಗಂಟೆಗೆ ನಡೆಯಲಿದೆ.
ತಾ 12 ರಂದು ನಾಪೋಕ್ಲು ಗ್ರಾಮದ ಭಗವತಿ ಸಮುದಾಯ ಭವನದಲ್ಲಿ ಎಸ್.ಎ. ಜಗದೀಶ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ನಾಪೋಕ್ಲು ಟೌನ್ ವಾರ್ಡ್ ಸಭೆಯು ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಪಿ.ಎಂ. ಅಬ್ದುಲ್‍ಅಜೀಜ್ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2.30 ಗಂಟೆಗೆ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆ ಕೋರಿದೆ.