ಕೂಡಿಗೆ, ಸೆ. 10: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರಾದ ರಾಜೇಶ್ ಮತ್ತು ಪ್ರಸನ್ನ ಮತ್ತಿತರರು ಚರ್ಚೆ ನಡೆಸಿದರು. ಕಾಮಗಾರಿಗಳು ನಡೆದಿರುವ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ನೀಡಿದರು. ಸಭೆಯಲ್ಲಿ ಜಮಾಬಂಧಿ ನೋಡಲ್ ಅಧಿಕಾರಿ ಹೇಮಂತ್‍ಕುಮಾರ್ ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್ ಸೇರಿದಂತೆ ಸದಸ್ಯರು ಇದ್ದರು. ನಂತರ ನೋಡಲ್ ಅಧಿಕಾರಿ ಮತ್ತು ಗ್ರಾ.ಪಂ ಆಡಳಿತ ಮಂಡಳಿ ಕಾಮಗಾರಿ ನಡೆದ ಸ್ಥಳಗಳನ್ನು ಗ್ರಾಮಸ್ಥರನ್ನೊಳಗೊಂಡಂತೆ ಪರಿಶೀಲನೆ ನಡೆಸಿದರು.