ಕುಶಾಲನಗರ, ಸೆ. 10: ಇಲ್ಲಿಗೆ ಸಮೀಪದ ಹೇರೂರು ಗ್ರಾಮದ ಒಕ್ಕಲಿಗರ ಸಂಘದ ಐದನೇ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಗ್ರಾಮದಲ್ಲಿ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ನಿವೃತ್ತ ಸೈನಿಕರಾದ ಬಿ.ಎಸ್. ಸುನಿಲ್, ಕೆ.ಎಸ್. ರಮೇಶ್ ಹಾಗೂ ನಿವೃತ್ತ ಶಿಕ್ಷಕಿ ಎಸ್.ಕೆ. ಮಲ್ಲಮ್ಮ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಸದಸ್ಯರಾದ ಬಿ.ಎಸ್. ಸುರೇಶ್ ಅವರ ಮಾದಾಪಟ್ಟಣದ ಮನೆಗೆ ಕಾವೇರಿ ನದಿಯ ನೆರೆ ಬಂದು ಹಾನಿಯಾದ ಕಾರಣ ಸಂಘದ ವತಿಯಿಂದ 5 ಸಾವಿರ ನಗದು ಹಣವನ್ನು ನೀಡಲಾಯಿತು.
ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎಸ್. ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ನಂಜೇಗೌಡ, ಅರುಣಕುಮಾರ್, ಬಿ.ಒಇ. ಲೋಕೇಶ್, ಚಂದ್ರಶೇಖರ್, ದಿಶಾಂತ್ ಕುಮಾರ್, ಧರ್ಮಪ್ಪ, ಗಣೇಶ್, ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ವನಿತಾ, ಸಾವಿತ್ರಿ ಮೊದಲಾದವರಿದ್ದರು.