ನಾಪೋಕು, ಸೆ. 9: ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿನಿತ್ಯ ವ್ಯಾಪಾರ ವಹಿವಾಟು ಸಂದರ್ಭ ಉತ್ಪತ್ತಿಯಾಗುವ ಪ್ಲಾಸ್ಟಿಕ್, ಒಣಕಸ ಹಾಗೂ ಇತರ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಟ್ರಾಕ್ಟರ್‍ಗೆ ನೀಡುವಂತೆ ಹಾಗೂ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇದಿಸಲು ಸಹಕರಿಸುವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ತಕರಿಗೆ ಪಂಚಾಯಿತಿ ಸೂಚನೆ ನೀಡಿದ್ದು ಈ ಬಗ್ಗೆ ತಾ.12 ರಂದು ನಾಪೋಕ್ಲು ಪಂಚಾಯಿತಿ ಕಚೆÉೀರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ವಾರ್ಡ್ ಸಭೆ ನಡೆಯಲಿದೆ.