ಮಡಿಕೇರಿ, ಸೆ. 9: ಕೊಡಗು ಜಿಲ್ಲೆ ಕಳೆದ ಹಲವು ಸಮಯಗಳಿಂದ ಸೂರ್ಯನ ಕಿರಣಗಳನ್ನೇ ಕಾಣದಂತಾಗಿದ್ದು, ಜಿಲ್ಲೆಯ ಜನತೆಯ ಪರಿತಾಪ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಸತತ ಎರಡು ವರ್ಷಗಳಿಂದ ಮಳೆಗಾಲದ ವಿಭಿನ್ನ ರೀತಿಯ ಸನ್ನಿವೇಶದಿಂದಾಗಿ ಕೊಡಗು ಜಿಲ್ಲೆಯ ಜನತೆ ಮಾತ್ರವಲ್ಲದೆ ಜಿಲ್ಲೆಯ ಭೌಗೋಳಿಕತೆಯ ಮೇಲೂ ವ್ಯತಿರಿಕ್ತ ಪರಿಣಾಮ ಹೆಚ್ಚುತ್ತಿದ್ದು, ಕೊಡಗಿನ ಮಡಿಕೇರಿ, ಸೆ. 9: ಕೊಡಗು ಜಿಲ್ಲೆ ಕಳೆದ ಹಲವು ಸಮಯಗಳಿಂದ ಸೂರ್ಯನ ಕಿರಣಗಳನ್ನೇ ಕಾಣದಂತಾಗಿದ್ದು, ಜಿಲ್ಲೆಯ ಜನತೆಯ ಪರಿತಾಪ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಸತತ ಎರಡು ವರ್ಷಗಳಿಂದ ಮಳೆಗಾಲದ ವಿಭಿನ್ನ ರೀತಿಯ ಸನ್ನಿವೇಶದಿಂದಾಗಿ ಕೊಡಗು ಜಿಲ್ಲೆಯ ಜನತೆ ಮಾತ್ರವಲ್ಲದೆ ಜಿಲ್ಲೆಯ ಭೌಗೋಳಿಕತೆಯ ಮೇಲೂ ವ್ಯತಿರಿಕ್ತ ಪರಿಣಾಮ ಹೆಚ್ಚುತ್ತಿದ್ದು, ಕೊಡಗಿನ ಮಳೆಗಾಲ ಈಗಷ್ಟೆ ಆರಂಭವಾದಂತಹ ರೀತಿಯಲ್ಲಿ ಅಬ್ಬರಿಸುತ್ತಿರುವದು, ಹಲವಷ್ಟು ದುರಂತಗಳನ್ನು ಸೃಷ್ಟಿಸುತ್ತಿರುವ ದರಿಂದಾಗಿ ಜಿಲ್ಲೆಯ ನಿವಾಸಿಗಳ ಬದುಕು ದುಸ್ತರವಾಗುತ್ತಿದೆ.

ದಕ್ಷಿಣ ಕೊಡಗಿನಲ್ಲಂತೂ ಈ ಬಾರಿ ನಿರಂತರವಾಗಿ ಮಳೆಯ ಆರ್ಭಟ ಮುಂದುವರಿಯುತ್ತಲೇ ಇರುವದು ಆತಂಕ ಸೃಷ್ಟಿಸುತ್ತಿದೆ. ಇತ್ತ ಉತ್ತರ ಕೊಡಗೂ ಕೂಡ ಪ್ರಸ್ತುತ ಈ ಪರಿಸ್ಥಿತಿಯಿಂದ ಹೊರತಾಗಿಲ್ಲ. ಸೆಪ್ಟಂಬರ್ ತಿಂಗಳಿನಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವವಾಗುತ್ತಿರುವದು ಸೇರಿ ಇಡೀ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿರುವದು ಮುಂದುವರಿಯುತ್ತಲೇ ಇದೆ. ಕೈಲ್‍ಮುಹೂರ್ತ, ಗಣೇಶ ಚತುರ್ಥಿ ಹಬ್ಬದ ಸಂಭ್ರಮ - ಸಡಗರಗಳು ಈ ಹಿಂದಿನಂತೆ ಕಂಡುಬರಲಿಲ್ಲ. ತಲಕಾವೇರಿ ಉಗಮಸ್ಥಾನದ

ಒತ್ತಿನ ಬ್ರಹ್ಮಗಿರಿ ಬೆಟ್ಟದಲ್ಲಿ ಉಂಟಾಗುತ್ತಿರುವ,

(ಮೊದಲ ಪುಟದಿಂದ) ಈ ತನಕ ಕಂಡು ಕೇಳದ ಅಪಾಯದ ಮುನ್ಸೂಚನೆ, ಭಾಗಮಂಡಲ ಮತ್ತೆ ಜಲಾವೃತಗೊಂಡಿರುವದು, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಸೇರಿದಂತೆ ಎಲ್ಲಾ ನದಿ - ತೊರೆಗಳು ಉಕ್ಕಿ ಹರಿಯುತ್ತಿರುವದು ಒಂದೆಡೆಯಾದರೆ, ಕೃಷಿಯನ್ನು ಅವಲಂಭಿಸಿರುವ ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾದ ಕಾಫಿಯೂ ಸೇರಿದಂತೆ ಇತರ ಫಸಲುಗಳೂ ನೆಲಕಚ್ಚುತ್ತಿರುವದು ಜನತೆಯ ಮುಂದಿನ ಬದುಕನ್ನು ಆತಂಕಕ್ಕೆ ಈಡುಮಾಡುತ್ತಿರುವದು ಮತ್ತೊಂದೆಡೆಯಾಗಿದೆ. ಇದರೊಂದಿಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಗಳು, ಸಂಚಾರ ವ್ಯವಸ್ಥೆಯೂ ಅಲ್ಲೋಲ - ಕಲ್ಲೋಲವಾಗುತ್ತಿದ್ದು, ವಿವಿಧ ರೀತಿಯಲ್ಲಿನ ಹಾನಿ ಪ್ರಕರಣಗಳು ಹೆಚ್ಚಾಗುತ್ತಲೇ ಇರುವದು ಈಗಿನ ವಾಸ್ತವತೆಯಾಗಿದೆ.

2018ರಲ್ಲಿ ಬೇಸಿಗೆಯ ಅವಧಿಯಿಂದಲೇ ಜಿಲ್ಲೆ ಸಾಕಷ್ಟು ಮಳೆಯನ್ನು ಕಂಡಿದ್ದು, ಜೂನ್ ತಿಂಗಳು ಹಾಗೂ ಆಗಸ್ಟ್ ತಿಂಗಳಿನಲ್ಲಿ ಭಾರೀ ದುರಂತ ಸಂಭವಿಸಿ ಹಲವು ಸಾವು ನೋವುಗಳು ಸಂಭವಿಸಿದ್ದು, ಇನ್ನೂ ಜನತೆಯ ಮನದಿಂದ ದೂರವಾಗಿಲ್ಲ.

ಆದರೆ ಪ್ರಸಕ್ತ ವರ್ಷ ಜೂನ್ ತಿಂಗಳಿಂದ ಬಹುತೇಕ ಕ್ಷೀಣಗೊಂಡಂ ತ್ತಿದ್ದ ಮಳೆ ಆಗಸ್ಟ್ ಆರಂಭದಿಂದ ಆರ್ಭಟಿಸಲಾರಂಭಿಸಿದ್ದು, ಕಳೆದ ವರ್ಷದ ಮಾದರಿಯಲ್ಲೇ ದುರಂತಗಳು ಕೇವಲ ಒಂದು ತಿಂಗಳ ಅವಧಿಯಲ್ಲೇ ಘಟಿಸಿಹೋಗಿವೆ. ಈ ಬಾರಿಯೂ ಕೊಡಗಿನಲ್ಲಿ ಹಲವಷ್ಟು ಜೀವಗಳು ಬಲಿಯಾಗಿವೆ. ಅದರಲ್ಲೂ ತೋರ ಹಾಗೂ ಭಾಗಮಂಡಲ ಸನಿಹದ ಕೋರಂಗಾಲದಲ್ಲಿನ ದುರಂತ ಮರೆಯಲಾಗದ್ದು. ತೋರದಲ್ಲಿ ಮಣ್ಣಿನಡಿ ಸಿಲುಕಿದ ಕೆಲವರ ದೇಹ ಕೂಡ ಪತ್ತೆಯಾಗದಿರುವದು ಈ ವರ್ಷದ ಕರಾಳತೆಯಾಗಿದೆ.

ಈ ಬಾರಿ 16 ಜೀವ ಬಲಿ

ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಈ ತನಕ ಮಡಿಕೇರಿ ತಾಲೂಕಿನಲ್ಲಿ 7 ಹಾಗೂ ವೀರಾಜಪೇಟೆ ತಾಲೂಕಿ ನಲ್ಲಿ 9 ಮಂದಿ ಸಾವಿಗೀಡಾಗಿದ್ದು, ಒಟ್ಟು 16 ಜೀವಗಳು ಬಲಿಯಾಗಿವೆ. ಮಡಿಕೇರಿ ತಾಲೂಕಿನ 7 ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಮೃತರ ಕುಟುಂಬಕ್ಕೆ ತಲಾ ರೂ. 5 ಲಕ್ಷದಂತೆ 35 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ.

ವೀರಾಜಪೇಟೆ ತಾಲೂಕಿನ ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯ ಕುಟುಂಬಕ್ಕೆ ತಲಾ ರೂ. 5 ಲಕ್ಷದಂತೆ ರೂ. 30 ಲಕ್ಷ ಪರಿಹಾರ ನೀಡಲಾಗಿದೆ. ಆದರೆ 3 ಪ್ರಕರಣಗಳಲ್ಲಿ ವಾರೀಸುದಾರರ ಬಗ್ಗೆ ಗೊಂದಲವಿರುವದರಿಂದ ಪರಿಹಾರ ಪಾವತಿಸಲಾಗಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಾನುವಾರುಗಳು

ಪ್ರಾಕೃತಿಕ ವಿಕೋಪದಿಂದಾಗಿ ಮಡಿಕೇರಿ ತಾಲೂಕಿನಲ್ಲಿ 17, ವೀರಾಜಪೇಟೆಯಲ್ಲಿ 16 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 43 ಜಾನುವಾರುಗಳು ಸೇರಿ ಒಟ್ಟು 76 ಜಾನುವಾರುಗಳು ಬಲಿಯಾಗಿದ್ದು, ರೂ. 10.72 ಲಕ್ಷ ಪರಿಹಾರ ವಿತರಣೆಯಾಗಿದೆ. ಜಿಲ್ಲಾಡಳಿತದ ಈಗಿನ ಮಾಹಿತಿಯಂತೆ ಮೂಲಭೂತ ಸೌಲಭ್ಯಗಳ ಹಾನಿಯ ವಿವರ ಇಂತಿದೆ. ರಸ್ತೆ, ಸರಕಾರಿ ಕಟ್ಟಡಗಳು, ಕೆರೆ, ಮೋರಿ, ಟ್ರಾನ್ಸ್‍ಫಾರ್ಮರ್, ವಿದ್ಯುತ್ ಕಂಬ ಇತ್ಯಾದಿ ಸೇರಿ ರೂ. 333.02 ಕೋಟಿಯಷ್ಟು ಹಾನಿಗೀಡಾಗಿರುವ ಬಗ್ಗೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ.

ಬೆಳೆ ಹಾನಿ

ಬೆಳೆ ಹಾನಿಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕಾರಕ್ಕೆ ತಾ. 14 ಕೊನೆಯ ದಿನವಾಗಿದೆ. ಈ ತನಕದ ವರದಿಯಂತೆ ಒಟ್ಟು 1,18,978 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ರೂ. 266.52 ಕೋಟಿ ನಷ್ಟವನ್ನು ಅಂದಾಜಿಸಲಾಗಿದೆ. ಸರಕಾರದ ಆದೇಶದಂತೆ ಜಿಲ್ಲೆಯ ಮೂರು ತಾಲೂಕಿನ ಪರಿಹಾರ ಕೇಂದ್ರಗಳಲ್ಲಿದ್ದ ಮತ್ತು ಬಂಧುಗಳ ಮನೆಯಲ್ಲಿ ಅಥವಾ ಇತರೆಡೆ ಆಶ್ರಯ ಪಡೆದಿದ್ದ ಜಿಲ್ಲೆಯ ಒಟ್ಟು 4,148 ಕುಟುಂಬಗಳಿಗೆ ತಲಾ ರೂ. 10 ಸಾವಿರದಂತೆ 4.15 ಕೋಟಿ ಮೊತ್ತವನ್ನು ವಿತರಿಸಲಾಗಿದೆ.

ಮನೆ ಹಾನಿ

ವಿವಿಧ ರೀತಿಯಲ್ಲಿ ಮನೆಗಳು ಹಾನಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ವಿವರ ಇಂತಿದೆ. ಮಡಿಕೇರಿ ತಾಲೂಕಿನಲ್ಲಿ 436, ವೀರಾಜಪೇಟೆ ತಾಲೂಕಿನಲ್ಲಿ 913 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 719 ಮನೆಗಳು ಸೇರಿ ಒಟ್ಟು 2068 ಮನೆಗಳು ಜಖಂಗೊಂಡಿವೆ. ಈ ವರದಿಯಲ್ಲಿ ಸಂಪೂರ್ಣ ಹಾನಿಯ 363 ಪ್ರಕರಣ, ಶೇ. 25 ರಿಂದ 75 ರಷ್ಟು ಹಾನಿಯ 643 ಪ್ರಕರಣ ಹಾಗೂ ಶೇ. 15 ರಿಂದ 25 ರಷ್ಟು ಹಾನಿಯ 1032 ಪ್ರಕರಣ ಮತ್ತು ಗುಡಿಸಲು ಹಾನಿಯ 30 ಪ್ರಕರಣಗಳು ಸೇರಿವೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ.