ಕುಶಾಲನಗರ, ಸೆ. 9: ಮದ್ಯಸೇವಿಸಿ ವಾಹನ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ನ್ಯಾಯಾಲಯ ತಲಾ ರು.10 ಸಾವಿರ ದಂಡ ವಿಧಿಸಿದೆ.
ಓರ್ವ ಕಾರು ಚಾಲಕ ಮತ್ತು ಇಬ್ಬರು ದ್ವಿಚಕ್ರ ವಾಹನ ಚಾಲಕರು ದಂಡ ತೆತ್ತಿರುವದಾಗಿ ತಿಳಿದು ಬಂದಿದೆ. ಕುಶಾಲನಗರ ಡಿವೈಎಸ್ಪಿ ಮುರಳೀಧರ್ ಸೂಚನೆ ಮೇರೆಗೆ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಮಾರ್ಗದರ್ಶ ನದಲ್ಲಿ ಶುಕ್ರವಾರ ಠಾಣಾಧಿಕಾರಿ ಸದಾಶಿವ ಮತ್ತು ಸಹಾಯಕ ಠಾಣಾಧಿಕಾರಿ ಮೋಹನ್ ಸುಕುಮಾರ್ ಸಿಬ್ಬಂದಿಗಳು ಅಳುವಾರ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ಸಂದರ್ಭ ಮದ್ಯ ಸೇವನೆ ಮಾಡಿ ವಾಹನ ಚಾಲಿಸುತ್ತಿದ್ದ ಮೂರು ಪ್ರಕರಣ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ ಹಿನ್ನೆಲೆಯಲ್ಲಿ ಸೋಮವಾರಪೇಟೆ ನ್ಯಾಯಾಲಯ ಈ ದಂಡ ವಿಧಿಸಿದೆ.