ವೀರಾಜಪೇಟೆ, ಸೆ. 9: ವೀರಾಜಪೇಟೆಯಲ್ಲಿ ಐತಿಹಾಸಿಕ ಪ್ರಸಿದ್ಧ ಗೌರಿಗಣೇಶನನ್ನು ಪೂಜಿಸುವದರೊಂದಿಗೆ ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಕಲಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತಿರುವದು ಉತ್ಸವಕ್ಕೆ ವಿಶೇಷ ಮೆರುಗನ್ನು ನೀಡಿದಂತಾಗಿದೆ. ಅರ್ಧ ಶತಮಾನಗಳಿಗಿಂತಲೂ ಅಧಿಕವಾಗಿ ಬಸವೇಶ್ವರ ದೇವಸ್ಥಾನದ ಗೌರಿಗಣೇಶ ಉತ್ಸವ ಸಮಿತಿಯ ಈ ಸೇವೆ ಸಮಾಜಕ್ಕೆ ಉತ್ತಮ ಕಾರ್ಯವೆನಿಸಿದೆ ಎಂದು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ವೀರಾಜಪೇಟೆ ಜೈನರಬೀದಿಯ ಬಸವೇಶ್ವರ ದೇವಸ್ಥಾನದ ಗೌರಿಗಣೇಶ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ವಿದೇಶಗಳಲ್ಲಿ ಕಲೆ ಸಂಸ್ಕøತಿಗೆ ಸರಕಾರವೇ ಸ್ವತಃ ಉತ್ತೇಜನ ನೀಡುತ್ತಿದೆ. ಆದರೆ ಭಾರತ ದೇಶ ಶ್ರೀಮಂತ ಸಂಸ್ಕøತಿಯನ್ನು ಹೊಂದಿದ್ದರೂ ಇಲ್ಲಿನ ಸಂಘಟನೆಗಳು ತನ್ನ ವಿಶೇಷ ಶ್ರಮದಿಂದ ಪದ್ಧತಿ, ಸಂಸ್ಕøತಿ ಕಲೆಗೆ ಪ್ರೋತ್ಸಾಹಿಸು ವಂತಾಗಿದೆ. ಅನೇಕ ದಶಕಗಳಿಂದಲೂ ಗೌರಿಗಣೇಶ ಉತ್ಸವ ಸಮಿತಿ ಇದನ್ನು ಅನುಸರಿಸಿ ಸಮಾಜ ಸೇವೆಗೂ ಬದ್ಧವಾಗಿರುವದು ವಿಶೇಷವೆನಿಸಿದೆ. ಒಂದು ಧರ್ಮದವರು ಮತ್ತೊಂದು ಧರ್ಮಕ್ಕೆ ಗೌರವ ಕೊಟ್ಟು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‍ನ ಎಲ್ಲ ಧರ್ಮಗಳು ಸೇರಿ ಈ ಉತ್ಸವದ ಆಚರಣೆ ಧರ್ಮ ಧರ್ಮಗಳ ನಡುವೆ ಸಾಮರಸ್ಯ, ಸಮಾಜದ ಐಕ್ಯತೆಗೂ ಕಾರಣವಾಗಲಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಎಚ್. ಮತೀನ್, ರೋಲಿಕ್ಸ್ ಶಾಲೆಯ ಸಿ.ಎಸ್. ಕಾವೇರಪ್ಪ, ಗ್ರೇಸಿ ಕಾವೇರಪ್ಪ, ಮೂರ್ನಾಡಿನ ಡಾ. ಕುಂಞÂ ಅಬ್ದುಲ್ಲಾ ಮಾತನಾಡಿದರು.
ಉತ್ಸವ ಸಮಿತಿಯ ಎನ್. ರವೀಂದ್ರನಾಥ್ ಕಾಮತ್, ಜೆ.ಎನ್. ಪುಷ್ಪರಾಜ್, ಜೆ.ಎನ್. ಸಂಪತ್ ಕುಮಾರ್, ಎನ್. ನರೇಂದ್ರ ಕಾಮತ್, ವೀರೇಂದ್ರ ಕಾಮತ್, ನಿಕ್ಷೇಪ್ ಮತ್ತಿತರರು ಹಾಜರಿದ್ದರು.
ಸಮಾರಂಭದ ನಂತರ ವೀರಾಜಪೇಟೆ ರೋಲಿಕ್ಸ್ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ನೃತ್ಯ ರೂಪಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಿದವು.