(ವಿಶೇಷ ವರದಿ.ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಸೆ.9 : ಮನೋರಂಜನೆಯೇ ಇಲ್ಲದ ಕಾಲದಲ್ಲಿ ದೂರದ ಮಡಿಕೇರಿಗೆ ತೆರಳಿ ಅಲ್ಲಿ ನಡೆಯುತ್ತಿದ್ದ ದಸರಾವನ್ನು ನೋಡಲು ಕಷ್ಟವಾಗಿದ್ದ ಕಾಲದಲ್ಲಿ ದಕ್ಷಿಣ ಕೊಡಗಿನ ಜನರಿಗಾಗಿಯೇ ಗೋಣಿಕೊಪ್ಪಲಿನಲ್ಲಿ ಹಿರಿಯರು ಒಗ್ಗೂಡಿ ದಸರಾ ಆಚರಣೆಯನ್ನು ಜಾರಿಗೆ ತಂದರು. ಒಂದಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ನಡೆದ ದಸರಾ ಈಗ ರಾಜಕೀಯ ಪ್ರತಿಷ್ಠೆಗೆ ಸಿಲುಕಿ ತನ್ನ ವೈಭವವನ್ನು ಕಳೆದುಕೊಳ್ಳುತ್ತಿದೆ.
ರಾಜ್ಯದಲ್ಲಿ ಮೈಸೂರು ದಸರಾ ಹೊರತುಪಡಿಸಿದರೆ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾಕ್ಕೆ ಹೆಚ್ಚಿನ ವಿಶೇಷತೆಯಿದೆ. ಅಷ್ಟೇ ಅಲ್ಲದೆ ಇಲ್ಲಿನ ದಸರಾ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಗೋಣಿಕೊಪ್ಪಲು ದಸರಾ ಮಧ್ಯಾಹ್ನದಿಂದಲೇ ಆರಂಭಗೊಳ್ಳುತ್ತದೆ. ನಾಡ ಹಬ್ಬ ದಸರಾ ಸಮಿತಿಯು ಗೋಣಿಕೊಪ್ಪಲು ಸುತ್ತ ಮುತ್ತಲಿನ ಗ್ರಾಮದ ಜನತೆಯನ್ನು ನಗರದತ್ತ ಸೆಳೆಯುವ ಪ್ರಯತ್ನ ಮಾಡುತ್ತಾ ಬಂದಿದೆ.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ದಸರಾ ಉತ್ಸವ ಆರಂಭವಾಗುವ ದಿನಾಂಕದ ಅರಿವಿದ್ದರೂ ಪಂಚಾಯ್ತಿ ಮಾತ್ರ ಈ ಬಗ್ಗೆ ದಸರಾ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಎಡವುತ್ತಿದೆ. ಕೆಲವೇ ಕೆಲವು ದಿನಗಳು ಬಾಕಿ ಇರುವಾಗ ಆತುರವಾಗಿ ಸಭೆ ಕರೆದು ಅಧ್ಯಕ್ಷರನ್ನು ನೇಮಕಗೊಳಿಸುತ್ತಾರೆ. ಇದರಿಂದ ಸರ್ಕಾರದ ಅನುದಾನ ತರಲು ಕಷ್ಟವಾಗುತ್ತಿದೆ. ಅನೇಕ ದಿನಗಳು ಸರ್ಕಾರಿ ರಜೆಯಲ್ಲಿಯೇ ಕಳೆದು ಹೋಗುವದರಿಂದ ಸರ್ಕಾರ ಮಟ್ಟದಲ್ಲಿ ವ್ಯವಹರಿಸಲು ಸಮಯ ಸಾಕಾಗುತ್ತಿಲ್ಲ. ತಿಂಗಳ ಮೊದಲೇ ದಸರಾ ಉತ್ಸವದ ಅಧ್ಯಕ್ಷರನ್ನಾಗಿ ನೇಮಕ ಮಾಡಿದಲ್ಲಿ ಎಲ್ಲವೂ ಸುಲಲಿತವಾಗಿ ನಡೆಯಲು ಅವಕಾಶ ದೊರೆತಂತಾಗುತ್ತದೆ. ಸ್ವಪ್ರತಿಷ್ಟೆಯ ರಾಜಕೀಯವನ್ನು ನಾಡ ಹಬ್ಬ ದಸರಾದಲ್ಲಿ ನುಸಳದಂತೆ ಪಂಚಾಯ್ತಿ ಸದಸ್ಯರು ಎಚ್ಚರ ವಹಿಸಬೇಕಾಗಿದೆ.
ದಸರಾ ಉತ್ಸವವನ್ನು ಆಚರಿಸುವ ಜವಾಬ್ದಾರಿ ಪಂಚಾಯ್ತಿ ಸುಪರ್ದಿಗೆ ಬಂದ ನಂತರ ಪಂಚಾಯ್ತಿ ಅಧ್ಯಕ್ಷರುಗಳಾದ ಬಿ.ಡಿ.ಮುಕುಂದ,ಥೋಮಸ್, ಸೆಲ್ವಿ, ಸದಸ್ಯರಾದ ಕೊಪ್ಪಿರ ಸನ್ನಿ, ಸಿ.ಕೆ.ಬೋಪಣ್ಣ,
(ಮೊದಲ ಪುಟದಿಂದ) ಕೆ.ಪಿ.ಬೋಪಣ್ಣ, ಹಾಗೂ ಪ್ರಮೋದ್ ಗಣಪತಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಇಲ್ಲಿಯ ತನಕ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ.
ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, ಕೊಪ್ಪದ ಸ್ನೇಹಿತರ ಬಳಗ, ಕಾಫಿ ಬೋರ್ಡ್‍ನ ಕಾಡ್ಲಯ್ಯಪ್ಪ ದಸರಾ ಸಮಿತಿ, ಅರ್ವತ್ತೋಕ್ಲುವಿನ ಶಾರದಾಂಭ ದಸರಾ ಸಮಿತಿ, 2ನೇ ವಿಭಾಗದ ಸರ್ವರ ದಸರಾ ಸಮಿತಿ, 3ನೇ ವಿಭಾಗದ ಯುವ ದಸರಾ ಸಮಿತಿ, ಮಾರ್ಕೇಟ್‍ನ ನವಚೇತನ ದಸರಾ ಸಮಿತಿ, ಕೈಕೇರಿಯ ಭಗವತಿ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿ ಮತ್ತು ಕಾವೇರಿ ದಸರಾ ಸಮಿತಿಯ ಮಂಟಪಗಳು ರಾಜಬೀದಿಗಳನ್ನು ತನ್ನ ವೈಭವ ತೋರುತ್ತ ಬರುತ್ತಿವೆ. ನಗರದಲ್ಲಿ ಹತ್ತು ದಿನಗಳ ಕಾಲ ಹಬ್ಬದ ವಾತಾವರಣ ವಿಭಾಗದ ಸರ್ವರ ದಸರಾ ಸಮಿತಿ, 3ನೇ ವಿಭಾಗದ ಯುವ ದಸರಾ ಸಮಿತಿ, ಮಾರ್ಕೇಟ್‍ನ ನವಚೇತನ ದಸರಾ ಸಮಿತಿ, ಕೈಕೇರಿಯ ಭಗವತಿ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿ ಮತ್ತು ಕಾವೇರಿ ದಸರಾ ಸಮಿತಿಯ ಮಂಟಪಗಳು ರಾಜಬೀದಿಗಳನ್ನು ತನ್ನ ವೈಭವ ತೋರುತ್ತ ಬರುತ್ತಿವೆ. ನಗರದಲ್ಲಿ ಹತ್ತು ದಿನಗಳ ಕಾಲ ಹಬ್ಬದ ವಾತಾವರಣ ಮನಸೆಳೆಯುತ್ತದೆ.ಈ ಹಿಂದೆ ನವರಾತ್ರಿ ಉತ್ಸವ ಯಶಸ್ವಿಗೊಳಿಸಲು 10 ದಿನಗಳ ಕಾರ್ಯಕ್ರಮವನ್ನು ತಿಂಗಳಿಗೆ ಮೊದಲೇ ಸರ್ವಧÀರ್ಮಿ ಯರು ಒಂದೆಡೆ ಸೇರಿ ಕಾರ್ಯಕ್ರಮಗಳ ರೂಪುರೇಷೆಯನ್ನು ಸಿದ್ಧಪಡಿಸುತ್ತಿದ್ದರು. ಕೆಲವು ಸಮಿತಿಯವರು ಉತ್ಸವ ಯಶಸ್ವಿಯಾಗಿ ನಡೆಯಲು ಕಟಿಬದ್ಧರಾಗಿ ದುಡಿಯುತಿದ್ದರು.