ವೀರಾಜಪೇಟೆ, ಸೆ. 8: ಗೌರಿ-ಗಣೇಶೋತ್ಸವದ ಅಂಗವಾಗಿ ನಡೆದ ಸಾಂಸ್ಕøತಿಕ ಕಾಯಕ್ರಮಗಳ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತಗಾರ ದಿಲಿಕುಮಾರ್ ಮತ್ತು ಸಂಗಡಿಗರಿಂದ ಕೀರ್ತನೆಗಳು ಹರಿದು ಬಂದಿತು.

ವೀರಾಜಪೇಟೆ ನಗರದ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವ ಆಚರಣೆಯ ಅಂಗವಾಗಿ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದ ಸಾಂಸ್ಕøತಿಕ ವೇದಿಕೆಯಲ್ಲಿ ಪ್ರಖ್ಯಾತ ವಿದ್ವಾನ್ ದಿಲಿಕುಮಾರ್ ಮತ್ತು ಶಿಷ್ಯ ವೃಂದದವರಿಂದ ಗಾನ ಸುಧೆ ಹೊರಹೊಮ್ಮಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಯೋಜಕತ್ವದ ನೆರವಿನೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೀರ್ತನೆಗಳು, ದೇವರ ನಾಮಗಳು ತ್ಯಾಗರಾಜ ಮತ್ತು ಪುರಂದರದಾಸರ ಕೀರ್ತನೆಗಳನ್ನು ಹಾಡಲಾಯಿತು. ಮಳೆಯ ನಡುವೆಯು ಕೀರ್ತನೆಗಳನ್ನು ಕೇಳಲು ಕಲಾಸಕ್ತರು ಹಾಜರಿದ್ದು, ಶಾಸ್ತ್ರೀಯ ಸಂಗೀತವನ್ನು ಆಲಿಸಿದರು. ದಿಲಿಕುಮಾರ್ ಮಗಳು ಡಿ. ಅಪೂರ್ವ ಮತ್ತು ಸಂಗಡಿಗರು ಹಾಡಿದ ತ್ಯಾಗರಾಜ ಕೀರ್ತನೆಯು ಕೇಳುಗರ ಮನವನ್ನು ಮಂತ್ರ ಮುಗ್ಧವನ್ನಾಗಿಸಿತು.

ದೇವಾಲಯದ ಆಡಳಿತ ಮಂಡಳಿ ಸದಸ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಕಲಾಸಕ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.