ಮಡಿಕೇರಿ, ಸೆ.8 : ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಕೃಷಿ, ತೋಟಗಾರಿಕೆ, ಕಾಫಿ ಹಾಗೂ ಸಂಬಾರ ಮತ್ತಿತರ ಹಾನಿಯಾದ ಬೆಳೆಗಳಿಗೆ ರೈತರಿಗೆ ಸೂಕ್ತ ಪರಿಹಾರ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿತ್ತು, ಯಾರಾದರೂ ರೈತರು ಬಿಟ್ಟು ಹೋಗಿದ್ದಲ್ಲಿ ತಾ. 14 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.