ಕೂಡಿಗೆ, ಸೆ. 7: ಇಲ್ಲಿಗೆ ಸಮೀಪದ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕಾಡಿನಂಚಿನ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆಗಳಿಗೆ ಹಾನಿ ಉಂಟುಮಾಡುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಗ್ರಾಮದ ಪಾರೆರ ಹೇಮಂತ್ ಎಂಬವರ ಜಮೀನಿಗೆ ನುಗಿದ ಕಾಡಾನೆ ಮರಿಗಳ ಹಿಂಡು 1.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 20 ಕ್ವಿಂಟಾಲ್‍ನಷ್ಟು ಸುವರ್ಣ ಗೆಡ್ಡೆ ಮತ್ತು ಮರಗೆಣಸು ಬೆಳೆಯನ್ನು ತಿಂದು, ತುಳಿದು ನಾಶ ಮಾಡಿವೆ.
ಸಮೀಪದ ಲತೀಶ್ ಎಂಬವರ ಜಮೀನಿನಲ್ಲಿ ಬೆಳೆದಿದ್ದ ಸುವರ್ಣ ಗೆಡ್ಡೆ ಬೆಳೆಗೂ ಆನೆಗಳು ಹಾನಿ ಮಾಡಿವೆ.ಹುದುಗೂರು ಉಪ ವಲಯ ಅರಣ್ಯಾಕಾರಿ ಸತೀಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.