ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೆರೆಯಿಂದ ಸಂತ್ರಸ್ತರಾದ ಯೋಜನೆಯ ಪಾಲುದಾರ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಿಲ್ಲಾ ನಿರ್ದೇಶಕ ಡಾ. ಯೋಗೀಶ್ ನಿರ್ದೇಶನದಲ್ಲಿ ಇತ್ತೀಚಿನ ಅತಿವೃಷ್ಟಿಯಿಂದಾಗಿ ತೊಂದರೆಗೊಳಗಾದ ಸುಮಾರು 500 ಕುಟುಂಬಗಳಿಗೆ ದಿನಬಳಕೆಯ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಸಿದ್ದಾಪುರ, ವೀರಾಜಪೇಟೆ, ಮೂರ್ನಾಡು, ನಾಪೋಕ್ಲುವಿನ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಗಳಲ್ಲಿ ಯೋಜನಾಧಿಕಾರಿ ಸದಾಶಿವ ಗೌಡ, ಕೃಷಿ ಅಧಿಕಾರಿ ಚೇತನ್ ಕೆ, ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ, ವಲಯದ ಮೇಲ್ವಿಚಾರಕರುಗಳಾದ ಪ್ರದೀಪ್ ರೈ, ರತ್ನ, ಜಯಶ್ರೀ, ಸಂತೋಷ್ ಫಲಾನುಭಾವಿಗಳಿಗೆ ಕಿಟ್ ವಿತರಿಸಿದರು. ಈ ಸಂದರ್ಭ ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಇದ್ದರು.
ನಾಪೆÇೀಕ್ಲು: ಈ ಬಾರಿಯ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ನಾಪೆÇೀಕ್ಲು ಸಮೀಪದ ಬೊಳಿಬಾಣೆಯ ಕೆ.ಎಸ್. ರಮೇಶ್ ಅವರಿಗೆ ನಾಪೆÇೀಕ್ಲು ಲಯನ್ಸ್ ಕ್ಲಬ್ ವತಿಯಿಂದ ರೂ. 10,000 ಚೆಕ್ ವಿತರಿಸಲಾಯಿತು.
ಈ ಸಂದರ್ಭ ನಾಪೆÇೀಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಚೌರೀರ ಉದಯ, ಕಾರ್ಯದರ್ಶಿ ಮುಕ್ಕಾಟಿರ ವಿನಯ್ ನಿರ್ದೇಶಕರಾದ ಕನ್ನಂಬಿರ ಸುಧಿ ತಿಮ್ಮಯ್ಯ, ಕೇಲೇಟಿರ ದೀಪು, ಅಪ್ಪಾರಂಡ ತಿಮ್ಮಯ್ಯ, ಶಿವಚಾಳಿಯಂಡ ಕಾಳಪ್ಪ, ಉದಿಯಂಡ ತಿಮ್ಮಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಗಣೇಶ್ ಮುತ್ತಪ್ಪ, ಕೇಟೋಳಿರ ರತ್ನಾ ಚರ್ಮಣ್ಣ ಇದ್ದರು.
ಗುಡ್ಡೆಹೊಸೂರು: ಇಲ್ಲಿನ ತೆಪ್ಪದಕಂಡಿ ಬಳಿಯ ಸುಮಾರು 32 ಕುಟುಂಬದವರಿಗೆ ಕಾಸರಗೋಡು ಜಿಲ್ಲೆಯ ಮುಳಿಯಾರ್ ಗ್ರಾಮದ ಮುಲಾಡ್ರಂ (ಎಂ.ವೈ.ಸಿ.) ಯೂತ್ ಕ್ಲಬ್ ವತಿಯಿಂದ ಹಾಸಿಗೆ ಮತ್ತು ಆಹಾರದ ಕಿಟ್ ವಿತರಿಸಲಾಯಿತು.
ಮಡಿಕೇರಿ: ಭಾರೀ ಮಳೆಯಿಂದ ಹಾನಿಗೊಳಗಾದ ವೀರಾಜಪೇಟೆ ತಾಲೂಕಿನ ತೋರ ಗ್ರಾಮದ ಸಂತ್ರಸ್ತರಿಗೆ ಆರ್ಮಡ್ ಕೇರ್ ಸಂಸ್ಥೆಯಿಂದ ಅಗತ್ಯ ವಸ್ತುಗಳನ್ನು ಸಂಘದ ಸದಸ್ಯನಾಗಿರುವ ಕರ್ನಲ್ ಅಯ್ಯಪ್ಪ ಅವರ ಮೂಲಕ ವಿತರಿಸಲಾಯಿತು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 59 ಮನೆಗಳಿಗೆ ಆಹಾರ ಕಿಟ್‍ಗಳನ್ನು ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಣೆ ಮಾಡಲಾಯಿತು. ಕಿಟ್ ಅನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ವಿತರಿಸಿದರು.
ಈ ಸಂದರ್ಭ ಸದಸ್ಯರಾದ ರಾಮಚಂದ್ರ, ರತ್ನಮ್ಮ, ಮೋಹಿನಿ, ರವಿ, ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪ, ಕಂದಾಯ ವಸೂಲಿಗಾರ ಅನಿಲ್‍ಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.
ಭಾಗಮಂಡಲ: ಪ್ರವಾಹದಿಂದ ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ಚೆಕ್ಕನ್ನು ವಿತರಿಸಲಾಯಿತು. ಭಾಗಮಂಡಲದ ಕಂದಾಯ ಇಲಾಖಾ ಕಚೇರಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್ ಇದ್ದರು.
ನಾಪೆÉÇೀಕ್ಲು: ಈ ಬಾರಿಯ ಪ್ರಕೃತಿ ವಿಕೋಪದಲ್ಲಿ ಮನೆ ಹಾನಿಯಾದವರಿಗೆ 25 ಸಾವಿರದಂತೆ ಸುಮಾರು 131 ಕುಟುಂಬದವರಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಪರಿಹಾರ ಚೆಕ್ ವಿತರಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಾಪೆÇೀಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷಕ ರಾಮಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಉಮಾ ಪ್ರಭು, ಪಾಡಿಯಮ್ಮಂಡ ಮನು ಮಹೇಶ್, ಕುಶು ಕುಶಾಲಪ್ಪ, ಮತ್ತಿತರರು ಇದ್ದರು.
ಕರಡಿಗೋಡು: ಪ್ರವಾಹ ಪೀಡಿತ ಕರಡಿಗೋಡು ಭಾಗದ ಕುಟುಂಬಗಳಿಗೆ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ವತಿಯಿಂದ ಇಲ್ಲಿನ ವರಕ್ಕಲ್ ಮುಲ್ಲಕೋಯ ಭವನದಲ್ಲಿ ಮನೆ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಕರೀಂ ಮುಸ್ಲಿಯಾರ್, ಹನೀಫ್ ಮುಸ್ಲಿಯಾರ್, ಮುಸ್ಲಿಂ ಜಮಾಅತ್ ಸದಸ್ಯರಾದ ಶಮೀರ್ ಮತ್ತು ಕರೀಂ ಇದ್ದರು.ಕೂಡುಮಂಗಳೂರು: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡುಮಂಗಳೂರು, ಕೂಡ್ಲೂರು ಗ್ರಾಮದ ಕಾವೇರಿ ನದಿ ತಟದಲ್ಲಿ ವಾಸವಿದ್ದ 45 ಮನೆಗಳಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಿ ರವಿ ವಿತರಣೆ ಮಾಡಿದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಆಯಿಷಾ, ಕಾರ್ಯದರ್ಶಿ ಮಾದಪ್ಪ, ಕಂದಾಯ ವಸೂಲಿಗಾರ ಅವಿನಾಷ್ ಸೇರಿದಂತೆ 45 ಕುಟುಂಬದ ಸದಸ್ಯರು ಹಾಜರಿದ್ದರು.
ಮೂರ್ನಾಡು: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಸಂಘದ ಸದಸ್ಯರಿಗೆ ಸಹಾಯ ಧನವನ್ನು ನೀಡಲಾಯಿತು. ಸಂಘದ ಸದಸ್ಯರಾಗಿರುವ ಕಟ್ಟೆಮಾಡು ಗ್ರಾಮದ ಉದಯ ಮತ್ತು ಬೇತ್ರಿ ಗ್ರಾಮದ ಹೆಚ್.ಜಿ. ದಿಲೀಪ್ ಅವರುಗಳ ಗ್ರಾಮಗಳಿಗೆ ತೆರಳಿ ಸಹಾಯ ಧನವನ್ನು ನೀಡಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಬಿ.ಪಿ. ಸುನಿಲ್, ಉಪಾಧ್ಯಕ್ಷ ಟಿ.ಎ. ಸುಬ್ರಮಣಿ, ಕಾರ್ಯದರ್ಶಿ ಅಶ್ವಥ್ ರೈ, ಖಜಾಂಚಿ ಎ.ಪಿ. ಲೋಕೇಶ್ ಹಾಗೂ ಸದಸ್ಯರುಗಳು ಹಾಜರಿದ್ದರು.
ಚೆಟ್ಟಳ್ಳಿ: ಕುಶಾಲನಗರದ ಎಸ್.ಡಿ.ಪಿ.ಐ. ವತಿಯಿಂದ ನೆರೆ ಸಂತ್ರಸ್ತ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯದರ್ಶಿ ಅಫ್ಸರ್, ಎಸ್.ಡಿ.ಪಿ.ಐ. ನಗರ ಘಟಕದ ಅಧ್ಯಕ್ಷ ಭಾಷಾ, ಮೂವತ್ತಕ್ಕೂ ಹೆಚ್ಚು ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಹಾಗೂ ನೆರೆ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಲಾಯಿತು.
ವೇದಿಕೆಯಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿ ಸೇನೆ ರಾಜ್ಯಾಧ್ಯಕ್ಷ ಹಫೀಜ್ ಖಾನ್, ತಾಲೂಕು ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಅಕ್ಬರ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಹ್ಮದ್ ಶಫಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕೂಡಿಗೆ: ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಕುವೆಂಪು ಬಡಾವಣೆ ಮತ್ತು ತಮ್ಮಯ್ಯಶೆಟ್ಟಿ ಬಡಾವಣೆಯ ನೆರೆ ಸಂತ್ರಸ್ತರಿಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಯ ವತಿಯಿಂದ ತಲಾ ರೂ. 10,000 ಚೆಕ್ ಮತ್ತು ಆಹಾರ ಕಿಟ್‍ಗಳನ್ನು 110 ಸಂತ್ರಸ್ತರಿಗೆ ವಿತರಿಸಲಾಯಿತು.
ಸಂತ್ರಸ್ತರಿಗೆ ಚೆಕ್ ಅನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಮತ್ತು ಆಹಾರ ಕಿಟ್‍ಗಳನ್ನು ಗ್ರಾ.ಪಂ. ಅಧ್ಯಕ್ಷೆ ಭವ್ಯ ವಿತರಿಸಿದರು. ಈ ಸಂದರ್ಭ ಕುಶಾಲನಗರ ನಾಡ ಕಚೇರಿಯ ಉಪ ತಹಶೀಲ್ದಾರ್ ಚಿಣ್ಣಪ್ಪ, ಗ್ರಾಮ ಲೆಕ್ಕಿಗ ಗುರುದರ್ಶನ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಗ್ರಾ.ಪಂ. ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಇದ್ದರು.
ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಕೂಡಿಗೆ ಗ್ರಾಮದ ಸಂತ್ರಸ್ತರಿಗೆ ಕೂಡಿಗೆ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಯ ವತಿಯಿಂದ ತಲಾ ರೂ. 10,000 ಚೆಕ್‍ಅನ್ನು 49 ಸಂತ್ರಸ್ತರಿಗೆ ವಿತರಿಸಲಾಯಿತು.
ಸಂತ್ರಸ್ತರಿಗೆ ಚೆಕ್ ಅನ್ನು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ವಿತರಿಸಿದರು. ಈ ಸಂದರ್ಭ ಕುಶಾಲನಗರ ನಾಡ ಕಚೇರಿಯ ಉಪ ತಹಶೀಲ್ದಾರ್ ಚಿಣ್ಣಪ್ಪ, ಗ್ರಾಮ ಲೆಕ್ಕಿಗ ಗುರುದರ್ಶನ್, ಗ್ರಾ.ಪಂ. ಕಾರ್ಯದರ್ಶಿ ಶಿಲ್ಪ, ಗ್ರಾ.ಪಂ. ಸದಸ್ಯರಾದ ಮೋಹಿನಿ, ಕೆ.ವೈ. ರವಿ, ರಾಮಚಂದ್ರ, ರತ್ನಮ್ಮ, ಕರವಸೂಲಿಗಾರ ಅನೀಲ್ ಇದ್ದರು.
ಕುಶಾಲನಗರ: ದಕ್ಷಿಣ ಕನ್ನಡ ಕೈಕಂಬದ ಸುನ್ನಿ ಯುವಜನ ಸಂಘದ ಶಾಖೆಯ ವತಿಯಿಂದ ಕುಶಾಲನಗರದ 50 ಸಂತ್ರಸ್ತ ಕುಟುಂಬಗಳಿಗೆ ಉಡುಪು, ಪಡಿತರ ಸಾಮಗ್ರಿ ಹಾಗೂ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಬದ್ರುದ್ದೀನ್ ಅಝ್ಹರಿ, ನಜೀಬ್ ಅಹಮದ್, ಬಶೀರ್ ಎಡಪದವು, ಅಬ್ದುಲ್ ಹಮೀದ್ ಕೈಕಂಬ, ಖೈಸರ್, ಮಜೀದ್ ಸಂಕೇಶ್, ಸೈಯದ್ ಬಾವ, ಶೇಕಬ್ಬ ಹಾಗೂ ನೂರೇ ಮದೀನಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವೀರಾಜಪೇಟೆ: ಕಾಕೋಟುಪರಂಬು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರಿನಲ್ಲಿ ವಕೀಲಿ ವೃತ್ತಿಯಲ್ಲಿರುವ ಕರವಟ್ಟಿರ ಪೆಮ್ಮಯ್ಯ ಅವರು ಕಾಕೋಟುಪರಂಬು ಶಾಲೆಯಲ್ಲಿ ಓದುತ್ತಿರುವ ನೆರೆ ಸಂತ್ರಸ್ತ ವಿದ್ಯಾರ್ಥಿಗಳ ಸಮವಸ್ತ್ರ, ನೋಟ್ ಪುಸ್ತಕಗಳ ಖರೀದಿಗಾಗಿ ರೂ. 20 ಸಾವಿರ ನಗದನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕುಂಡಚ್ಚಿರ ಚಿಂಗಪ್ಪ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಲಾ ಮುಖ್ಯಸ್ಥ ಹೊನ್ನೂರುಸ್ವಾಮಿ ಉಪಸ್ಥಿತರಿದ್ದರು.