ನಾಪೆÇೀಕ್ಲುs, ಸೆ. 6: ಸೆ. 2ರ ಗಣೇಶ ಚತುರ್ಥಿಯಂದು ಪಟ್ಟಣದ ಐದು ಕಡೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಅಲಂಕೃತ ಮಂಟಪಗಳಲ್ಲಿರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸಮೀಪದ ಕಾವೇರಿ ನದಿಯಲ್ಲಿ ವಿಸರ್ಜಿಸುವದರೊಂದಿಗೆ ಗಣೇಶೋತ್ಸವವು ಸಂಪನ್ನಗೊಂಡಿತು.
ಕಳೆದ ಐದು ದಿನಗಳಿಂದ ವಿವಿಧ ಗಣೇಶ ಪ್ರತಿಷ್ಠಾಪನಾ ಸಮಿತಿಯವರು ತಾವು ಸ್ಥಾಪಿಸಿದ ಗಣೇಶನಿಗೆ ವಿಶೇಷ ಪೂಜೆ, ಹೋಮ, ಹವನಾದಿಗಳನ್ನು ಅರ್ಪಿಸಿದರು. ಒಂದೊಂದು ಸಮಿತಿಯವರು ನಾ ಮುಂದು ತಾ ಮುಂದು ಎಂಬಂತೆ ಸಂಜೆ ಸಂಗೀತ, ಸಾಂಸ್ಕøತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ ತಮ್ಮ ಪ್ರತಿಷ್ಠೆ ಮೆರೆದರು.
ಅಪರಾಹ್ನ 3 ಗಂಟೆಗೆ ಪ್ರಾರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆ ರಾತ್ರಿ 9 ಗಂಟೆಯವರೆಗೂ ನಡೆಯಿತು. ಬೇರೆ ಬೇರೆ ಗಣೇಶೋತ್ಸವ ಸಮಿತಿಯವರು ತಮ್ಮ ಅಲಂಕೃತ ಮಂಟಪದೆದುರು ವಿವಿಧ ತರದ ಮನೋರಂಜನೆ, ಸಂಗೀತ, ನೃತ್ಯ, ಹುಲಿವೇಶದಾರಿಗಳೊಂದಿಗೆ ನಲಿದು, ಕುಣಿದು ಕುಪ್ಪಳಿಸಿದರು.
ವರುಣ ದೇವ ಆಗಾಗ ಮೆರವಣಿಗೆಯೊಂದಿಗೆ ಸಾಥ್ ನೀಡುವದರ ಮೂಲಕ ತೊಂದರೆ ನೀಡಿದ್ದು, ಸಾರ್ವಜನಿಕರಿಗೆ ಬೇಸರವುಂಟುಮಾಡಿತು. ಮಧ್ಯಾಹ್ನ 12 ಗಂಟೆಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಮಡಿಕೇರಿ ಮಹಿಳಾ ಠಾಣಾಧಿಕಾರಿ ಅಚ್ಚಮ್ಮ, ನಾಪೆÇೀಕ್ಲು ಪೆÇಲೀಸ್ ಠಾಣಾ ಎ.ಎಸ್.ಐ ದೇವರಾಜ್ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
-ಪಿ.ವಿ.ಪ್ರಭಾಕರ್