ಸೋಮವಾರಪೇಟೆ, ಸೆ. 4: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ 2018-19ನೇ ಸಾಲಿನ ಜಮಾಬಂದಿ (ಸಾಮಾಜಿಕ ಲೆಕ್ಕಪರಿಶೋಧನಾ) ಸಭೆ ತಾ. 6 ರಂದು ಬೆಳಿಗ್ಗೆ 11ಕ್ಕೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಿಡಿಒ ಹೇಮಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ. ದಿವಾಕರ ವಹಿಸಲಿದ್ದಾರೆ. ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಮುತ್ತಪ್ಪ ನೋಡಲ್ ಅಧಿಕಾರಿಯಾಗಿ ಪಾಲ್ಗೊಳ್ಳಲಿದ್ದಾರೆ.