ಗೋಣಿಕೊಪ್ಪಲು, ಸೆ. 3: ಬಾಳೆಲೆ ಮಾರುಕಟ್ಟೆ ಪ್ರದೇಶದಲ್ಲಿ ಅಂದಾಜು 70 ವರ್ಷ ವಯಸ್ಸಿನ ಪುರುಷ ಅಪರಿಚಿತ ಶವ ತಾ.2 ರಂದು ಬೆಳಿಗ್ಗೆ ಕಂಡು ಬಂದಿದೆ. ಭಾನುವಾರ ರಾತ್ರಿ ಮಾರುಕಟ್ಟೆ ಮಳಿಗೆಯೊಂದರಲ್ಲಿ ಮಲಗಿರುವ ಸಾಧ್ಯತೆ ಇದ್ದು ಸೋಮವಾರ ಬೆಳಿಗ್ಗೆ ಅಲ್ಲಿನ ಪೌರಕಾರ್ಮಿಕ ಕಸ ಗುಡಿಸಲು ತೆರಳಿದ ಸಂದರ್ಭ ಶವ ಗೋಚರವಾಗಿದೆ.

ಬಾಳೆಲೆ ಪಿಡಿಓ ಪೊನ್ನಂಪೇಟೆ ಪೊಲೀಸರಿಗೆ ನೀಡಿದ ಮಾಹಿತಿ ಮೇರೆ ಶವವನ್ನು ಗೋಣಿಕೊಪ್ಪಲಿಗೆ ತಂದು ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರು ಇದ್ದಲ್ಲಿ ಪೊನ್ನಂಪೇಟೆ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ.