ಗೋಣಿಕೊಪ್ಪ ವರದಿ, ಸೆ. 3: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪೊನ್ನಂಪೇಟೆ ಘಟಕದ ವತಿಯಿಂದ ಆಯೊಜಿಸಿದ್ದ ಮನೆ ಮನೆ ಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಕವನಗಳು ವಾಚನಗೊಂಡವು.
ಪ್ರಸ್ತುತ ವಿದ್ಯಮಾನದ ಬಗ್ಗೆ ಕವಿಗಳಾದ ಬಿ.ಎಸ್. ಕಾವೇರಿ, ಕಿಶೋರ್ ಕುಮಾರ್, ಕೆ.ಯು. ಪ್ರಮೀಳ, ಎಸ್.ಪಿ. ಸಂಧ್ಯಾ, ಎನ್.ಎಂ. ವಿನೀತ್, ನಾಗೇಂದ್ರ ಪ್ರಸಾದ್, ಬೆಳ್ಯಪ್ಪ, ಸಂತೋಷ್ಕುಮಾರ್, ಪಿ.ಜಿ. ವೀಣಾ, ರೊನಾಲ್ಡ್, ವೇದ ಬೋಪಣ್ಣ, ಉಳುವಂಗಡ ಕಾವೇರಿ ಉದಯ, ಚಿಮ್ಮಚ್ಚೀರ ಪವಿತಾ ರಂಜನ್, ಸುರಭಿ ಪ್ರಸಾದ್, ಕಿಗ್ಗಾಲು ಗಿರೀಶ್, ಸದಾನಂದ ಪುರೋಹಿತ್, ವೀಣಾ ಪುರೋಹಿತ್, ಹರೀಶ್ ಕಿಗ್ಗಾಲು, ನಳಿನಿ ಬಿಂದು, ವಿಮಲಾ ದಶರಥ, ಪುಷ್ಪಲತಾ ಶಿವಪ್ಪ, ಕೃತಿಮಾ ಚಂಗಪ್ಪ, ಟೀನಾ ಮಾಚಯ್ಯ, ಪುಷ್ಪ ಅಶೋಕ್, ವೈಲೇಶ್, ಸೈಮನ್ ಕವನ ವಾಚನ ಮಾಡಿದರು. ಕವಿ ಕಿಗ್ಗಾಲು ಗಿರೀಶ್ ಅವರಿಂದ ರಸಪ್ರಶ್ನೆ ನಡೆಯಿತು. ಕ್ರೀಡಾ ಸಾಧನೆಗಾಗಿ ದಿಯಾ ಭೀಮಯ್ಯ, ಸಂಗೀತ ಸಾಧನೆಗೆ ಎಂ.ಡಿ. ಆಯುಷ್, ಉತ್ತಮ ಶಿಕ್ಷಕಿ ಮೀರಾ ಶಂಭು ಅವರನ್ನು ಈ ಸಂದÀರ್ಭ ಸನ್ಮಾನಿಸಲಾಯಿತು.
ಕಲಾವಿದ ಬಿ.ಆರ್. ಸತೀಶ್ ಹಾಗೂ ಗಾಯಕ ಟಿ.ಡಿ. ಮೋಹನ್, ಕೆ.ಯು. ಪ್ರಮೀಳಾ, ಸಂಗನಗೌಡ ಪಾಟೀಲ್, ಮೀರಾ ಶಂಭು, ಎಂ.ಡಿ. ಆಯುಷ್ ಅವರಿಂದ ನಡೆಸಿಕೊಟ್ಟ ಕುಂಚ ಗಾಯನ ಹೆಚ್ಚು ಗಮನ ಸೆಳೆಯಿತು. ಕನ್ನಡ ಕಾರ್ಯಕ್ರಮಕ್ಕೆ ಶಾಲೆಯಲ್ಲಿ ಅವಕಾಶ ಮಾಡಿಕೊಟ್ಟ ಕೂರ್ಗ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಬೆನ್ನಿ ಕೊರಿಯಾಕೋಸ್ ಅವರನ್ನು ಗೌರವಿಸಲಾಯಿತು. ಕೂರ್ಗ್ ಪಬ್ಲಿಕ್ ಶಾಲೆ ಉಪ ಪ್ರಾಂಶುಪಾಲ ವೇದ ಬೋಪಣ್ಣ ಮಾತನಾಡಿ, ಇಂಗ್ಲಿಷ್ ಭಾಷೆ ಬಳಕೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮೂಲಕ ಭಾಷಣ ಮಾಡುವದು ಕೂಡ ಕುತೂಹಲ ಮೂಡಿಸುತ್ತಿದೆ ಎಂದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪೊನ್ನಂಪೇಟೆ ಘಟಕದ ಅಧ್ಯಕ್ಷೆ ಎಂ.ಬಿ. ಜಯಲಕ್ಷ್ಮಿ ಮನೆ ಮನೆ ಕಾವ್ಯಗೋಷ್ಠಿ ಸಂಚಾಲಕ ಪಿ.ಎಸ್. ವೈಲೇಶ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಗೌ. ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ, ಜಿಲ್ಲಾ ಲೇಖಕರ ಬಳಗ ಹಾಗೂ ಕಲಾವಿದರ ಬಳಗ ಅಧ್ಯಕ್ಷ ಕೇಶವ ಕಾಮತ್, ಕಾಫಿ ಬೆಳೆಗಾರ ವಸಂತಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು.