ಗೋಣಿಕೊಪ್ಪ ವರದಿ, ಸೆ. 3: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪೊನ್ನಂಪೇಟೆ ಘಟಕದ ವತಿಯಿಂದ ಆಯೊಜಿಸಿದ್ದ ಮನೆ ಮನೆ ಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಕವನಗಳು ವಾಚನಗೊಂಡವು.
ಪ್ರಸ್ತುತ ವಿದ್ಯಮಾನದ ಬಗ್ಗೆ ಕವಿಗಳಾದ ಬಿ.ಎಸ್. ಕಾವೇರಿ, ಕಿಶೋರ್ ಕುಮಾರ್, ಕೆ.ಯು. ಪ್ರಮೀಳ, ಎಸ್.ಪಿ. ಸಂಧ್ಯಾ, ಎನ್.ಎಂ. ವಿನೀತ್, ನಾಗೇಂದ್ರ ಪ್ರಸಾದ್, ಬೆಳ್ಯಪ್ಪ, ಸಂತೋಷ್‍ಕುಮಾರ್, ಪಿ.ಜಿ. ವೀಣಾ, ರೊನಾಲ್ಡ್, ವೇದ ಬೋಪಣ್ಣ, ಉಳುವಂಗಡ ಕಾವೇರಿ ಉದಯ, ಚಿಮ್ಮಚ್ಚೀರ ಪವಿತಾ ರಂಜನ್, ಸುರಭಿ ಪ್ರಸಾದ್, ಕಿಗ್ಗಾಲು ಗಿರೀಶ್, ಸದಾನಂದ ಪುರೋಹಿತ್, ವೀಣಾ ಪುರೋಹಿತ್, ಹರೀಶ್ ಕಿಗ್ಗಾಲು, ನಳಿನಿ ಬಿಂದು, ವಿಮಲಾ ದಶರಥ, ಪುಷ್ಪಲತಾ ಶಿವಪ್ಪ, ಕೃತಿಮಾ ಚಂಗಪ್ಪ, ಟೀನಾ ಮಾಚಯ್ಯ, ಪುಷ್ಪ ಅಶೋಕ್, ವೈಲೇಶ್, ಸೈಮನ್ ಕವನ ವಾಚನ ಮಾಡಿದರು. ಕವಿ ಕಿಗ್ಗಾಲು ಗಿರೀಶ್ ಅವರಿಂದ ರಸಪ್ರಶ್ನೆ ನಡೆಯಿತು. ಕ್ರೀಡಾ ಸಾಧನೆಗಾಗಿ ದಿಯಾ ಭೀಮಯ್ಯ, ಸಂಗೀತ ಸಾಧನೆಗೆ ಎಂ.ಡಿ. ಆಯುಷ್, ಉತ್ತಮ ಶಿಕ್ಷಕಿ ಮೀರಾ ಶಂಭು ಅವರನ್ನು ಈ ಸಂದÀರ್ಭ ಸನ್ಮಾನಿಸಲಾಯಿತು.
ಕಲಾವಿದ ಬಿ.ಆರ್. ಸತೀಶ್ ಹಾಗೂ ಗಾಯಕ ಟಿ.ಡಿ. ಮೋಹನ್, ಕೆ.ಯು. ಪ್ರಮೀಳಾ, ಸಂಗನಗೌಡ ಪಾಟೀಲ್, ಮೀರಾ ಶಂಭು, ಎಂ.ಡಿ. ಆಯುಷ್ ಅವರಿಂದ ನಡೆಸಿಕೊಟ್ಟ ಕುಂಚ ಗಾಯನ ಹೆಚ್ಚು ಗಮನ ಸೆಳೆಯಿತು. ಕನ್ನಡ ಕಾರ್ಯಕ್ರಮಕ್ಕೆ ಶಾಲೆಯಲ್ಲಿ ಅವಕಾಶ ಮಾಡಿಕೊಟ್ಟ ಕೂರ್ಗ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಬೆನ್ನಿ ಕೊರಿಯಾಕೋಸ್ ಅವರನ್ನು ಗೌರವಿಸಲಾಯಿತು. ಕೂರ್ಗ್ ಪಬ್ಲಿಕ್ ಶಾಲೆ ಉಪ ಪ್ರಾಂಶುಪಾಲ ವೇದ ಬೋಪಣ್ಣ ಮಾತನಾಡಿ, ಇಂಗ್ಲಿಷ್ ಭಾಷೆ ಬಳಕೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮೂಲಕ ಭಾಷಣ ಮಾಡುವದು ಕೂಡ ಕುತೂಹಲ ಮೂಡಿಸುತ್ತಿದೆ ಎಂದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪೊನ್ನಂಪೇಟೆ ಘಟಕದ ಅಧ್ಯಕ್ಷೆ ಎಂ.ಬಿ. ಜಯಲಕ್ಷ್ಮಿ ಮನೆ ಮನೆ ಕಾವ್ಯಗೋಷ್ಠಿ ಸಂಚಾಲಕ ಪಿ.ಎಸ್. ವೈಲೇಶ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಗೌ. ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ, ಜಿಲ್ಲಾ ಲೇಖಕರ ಬಳಗ ಹಾಗೂ ಕಲಾವಿದರ ಬಳಗ ಅಧ್ಯಕ್ಷ ಕೇಶವ ಕಾಮತ್, ಕಾಫಿ ಬೆಳೆಗಾರ ವಸಂತಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಾಧನೆ
ಕೂಡಿಗೆ, ಸೆ. 3 : ಎಡವನಾಡು ಸರ್ಕಾರಿ ಗಿರಿಜನ ಆಶ್ರಮ ಶಾಲೆ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಂಡ ಪ್ರಶಸ್ತಿ ಯನ್ನು ಪಡೆಯುವ ಮೂಲಕ ಸಾಧನೆಗೈದಿದ್ದಾರೆ.
ಹೆಬ್ಬಾಲೆಯಲ್ಲಿ ನಡೆದ ವಲಯಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಬಾಲಕ ಬಾಲಕಿಯರು ಕಬಡ್ಡಿ ಪಂದ್ಯಾಟ ದಲ್ಲಿ ಪ್ರಥಮ ಸ್ಥಾನಗಳಿಸುವದರ ಜೊತೆಗೆ ಅಥ್ಲೆಟಿಕ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ಕ್ರೀಡೆಯಲ್ಲಿ ಎಂಟು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಚಾಲನೆ
ವೀರಾಜಪೇಟೆ, ಸೆ. 3: ಕ್ರೀಡೆ ಹಾಗೂ ಇತರ ರಂಗಗಳಲ್ಲಿ ಸಾಧನೆ ಮಾಡಲು ವಿಶೇಷ ಆಸಕ್ತಿ, ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗೆ ಆದ್ಯತೆ ನೀಡುವದರೊಂದಿಗೆ ಕ್ರೀಡೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಬಿದ್ದಪ್ಪ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜು ವತಿಯಿಂದ, ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಶನ್ನಿನ ಸಹಯೋಗದೊಂದಿಗೆ ಮುರುವಂಡ ನಂಜಪ್ಪ ಸ್ಮಾರಕ ಜಿಲ್ಲಾಮಟ್ಟದ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯಾರ್ಥಿ ಜೀವನದಲ್ಲಿ ಎಲ್ಲ ಕ್ರೀಡೆಗಳಲ್ಲಿಯೂ ತನ್ನ ಪ್ರತಿಭೆಯನ್ನು ತೋರಿಸುವಂತಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಹತ್ವಾಕಾಂಕ್ಷಿ ಯೋಜನೆಯಾದ ಫಿಟ್ ಇಂಡಿಯಾ ವನ್ನು ಜಾರಿಗೆ ತಂದಿರುವದು ದೇಶದ ನಾಗರಿಕರಿಗೆ ಸಹಕಾರಿ ಯಾಗಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಕೊಡವ ಸಮಾಜದ ಮಾಜಿ ಅಧ್ಯಕ್ಷ ನಾಯಡ ವಾಸು ನಂಜಪ್ಪ ಮಾತನಾಡಿ, ಟೇಬಲ್ ಟೆನ್ನಿಸ್ ಪಂದ್ಯಾಟ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಸಲು ಇಂತಹ ಜಿಲ್ಲಾ ಮಟ್ಟದ ಪಂದ್ಯಾಟಗಳು ಉತ್ತೇಜನ ನೀಡುತ್ತವೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಕಾಕೋಟುಪರಂಬು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಮೇವಡ ಚಿಣ್ಣಪ್ಪ, ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಶನ್‍ನ ಅಧ್ಯಕ್ಷ ಮಹಮ್ಮದ್ ಆಶೀಫ್ ಮಾತನಾಡಿದರು. ಗೋಣಿಕೊಪ್ಪಲಿನ ನಿವೃತ್ತ ಪೋಸ್ಟ್ ಮಾಸ್ಟರ್ ಮುರುವಂಡ ಉಮ್ಮಕ್ಕ ನಂಜಪ್ಪ ಉಪಸ್ಥಿತರಿದ್ದರು.
ಕ್ರೀಡಾ ವಿಭಾಗದ ಡಾ. ಎಂ.ಎಂ. ದೇಚಮ್ಮ ಹಾಜರಿದ್ದರು. ಪ್ರಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಸ್ವಾಗತಿಸಿ, ರಂಜಿತ, ಕವನ ಹಾಗೂ ಸಾಲಿಕ ನಿರೂಪಿಸಿದರು. ಎನ್.ಎಂ. ನಾಣಯ್ಯ ವಂದಿಸಿದರು.
ಕಾವೇರಿ ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಶಿಬಿರ
ಗೋಣಿಕೊಪ್ಪ ವರದಿ, ಸೆ. 3: ಉತ್ತಮ ಮನಸ್ಸು ಹೊಂದಿರುವವ ರಿಂದ ಮಾತ್ರ ಸಮಾಜವನ್ನು ಬದಲಿಸಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಡಾ. ಪೂರ್ಣಿಮ ಜೋಗಿ ಅಭಿಪ್ರಾಯ ಪಟ್ಟರು. ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ, ಸುವರ್ಣ ಕಾವೇರಿ ಸಾಂತ್ವನ ಯೋಜನೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೆನೆÀಪೊಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕ್ಯಾನ್ಸರ್ ಅರಿವು ಜಾಗೃತಿ ಕಾರ್ಯಕ್ರಮ ಮತ್ತು ಮೂಲಭೂತ ಜೀವನ ಆಧಾರ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಯೆನೆಪೊಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವಿನಿ ಎಸ್. ಶೆಟ್ಟಿ ಮಾತನಾಡಿ, ಕ್ಯಾನ್ಸರ್ ರೋಗದ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿಕೊಂಡು ಆರೋಗ್ಯ ಕಾಪಾಡುವಲ್ಲಿ ಕಾಳಜಿ ವಹಿಸಬೇಕು ಎಂದರು. ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ ಮಾತನಾಡಿ, ಒಂದಷ್ಟು ರೋಗಕ್ಕೀಡಾದವರು ಮೂಢನಂಬಿಕೆ ಯಿಂದ ಅವೈಜ್ಞಾನಿಕ ವಾಗಿ ರೋಗ ನಿಯಂತ್ರಣಕ್ಕೆ ಮುಂದಾಗುವದರಿಂದ ಕ್ಯಾನ್ಸರ್ ನಂತಹ ಕಾಯಿಲೆಯಿಂದ ಹೆಚ್ಚು ತೊಂದರೆಗೀಡಾಗುತ್ತಿರುವ ಘಟನೆ ನಡೆಯುತ್ತಿದೆ ಎಂದು ಹೇಳಿದರು. ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಕ್ಯಾನ್ಸರ್ ಬಗ್ಗೆ ವೈದ್ಯರಾದ ಡಾ. ಅಜೀಜ್, ಡಾ. ಇಮ್ರಾನ್ ಪಾಶಾ, ಡಾ. ವಿಷ್ಣು, ಡಾ. ಧನಂಜಯ, ಡಾ. ವಿನುತ್, ಡಾ. ಲಿಜೋ, ಡಾ. ರಾಹುಲ್ ಅರಿವು ಮೂಡಿಸಿದರು.
ಈ ಸಂದರ್ಭ ಯೆನೆಪೊಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ, ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ವಿ. ಕುಸುಮಾಧರ್, ಕಾವೇರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಶ್ರೀನಿವಾಸ್, ಎನ್‍ಎಸ್‍ಎಸ್ ಅಧಿಕಾರಿಗಳಾದ ವನೀತ್‍ಕುಮಾರ್, ಎನ್.ಪಿ. ರೀತಾ, ನಿರ್ಮಿತಾ, ತಿರುಮಲ್ಲಯ್ಯ, ದೀಪಾ, ಪ್ರಸಾದ್‍ರಾವ್ ಉಪಸ್ಥಿತರಿದ್ದರು.
ಗಿಡನೆಡುವ ಕಾರ್ಯಕ್ರಮ
ಕುಶಾಲನಗರ, ಸೆ. 3: ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಇಳೆಅರಸನ್ ಜೆಸಿಐ ಕುಶಾಲನಗರ ಕಾವೇರಿ ಇಂದು ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಮಹಿಳಾ ಸಮಾಜ ರಸ್ತೆಯಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಮಾರ್ಗಸೂಚಿ ಸ್ವಾಗತ ನಾಮಫಲಕ ಉದ್ಘಾ ಟಿಸಿದರು.
ವಲಯ ಅಧ್ಯಕ್ಷ ಜಫಿನ್‍ಜಾಯ್, ಉಪಾಧ್ಯಕ್ಷ ಕೆ. ಪ್ರವೀಣ್, ಅಧಿಕಾರಿ ಭರತ್ ಆಚಾರ್ಯ, ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷ ಜೆಸಿ ಪ್ರಶಾಂತ್, ಸ್ಥಾಪಕ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಕಾವೇರಿ ಪರಿಸರ ರಕ್ಷಣಾ ಬಳಗದ ಎಂ.ಎನ್.ಚಂದ್ರಮೋಹನ್, ಬಿ.ಜೆ.ಅಣ್ಣಯ್ಯ, ಜೆಸಿ ಪ್ರಮುಖರಾದ ರಾಜೇಂದ್ರ, ಸುಜಯ್ ಮತ್ತಿತರರು ಇದ್ದರು.
ಬೀಜದುಂಡೆಗಳ ಬಿತ್ತನೆ
ವೀರಾಜಪೇಟೆ, ಸೆ. 3: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ತಿತಿಮತಿ ವಲಯದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ವಿವಿಧ ಜಾತಿಯ ಕಾಡು ಮರಗಳ 3,000 ಬೀಜದುಂಡೆಗಳನ್ನು ಬಿತ್ತನೆ ಮಾಡಲಾಯಿತು.
ಹಲಸು, ಬಿದಿರು, ಹಾಲೇಹಣ್ಣು, ಹೊಂಗೆ, ಕಾಡುಬೇವು ಮುಂತಾದ ಕಾಡುಮರಗಳ ಬೀಜವನ್ನು ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ಸಾವಯುವ ಕೃಷಿ ಸಹಕಾರಿ ನಿಯಮಿತ, ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲÀಸ್ಟರ್ ಹಾಗೂ ಬೆಂಗಳೂರಿನ ಸಮರ್ಥ ಭಾರತ ಸಂಸ್ಥೆಯು ಪ್ರಾಯೋಜಿಸಿತ್ತು.
ಬೀಜದುಂಡೆಗಳನ್ನು ಸಿದ್ಧಪಡಿಸಲು ಬಳಟ್ಟಿಕಾಳಂಡ ಪಿ. ಮುದ್ದಯ್ಯ ಮಾರ್ಗದರ್ಶನ ಮಾಡಿದರು. ತಿತಿಮತಿ ವಲಯ ಅಧಿಕಾರಿ ಶಿವಾನಂದ್, ದುರ್ಗೇಶ್, ವಿಶ್ವಾನಂದ್ ಹಾಗೂ ಶಿರಾಜ್ ವಿದ್ಯಾರ್ಥಿಗಳಿಗೆ ಬೀಜದುಂಡೆಗಳನ್ನು ಬಿತ್ತರಿಸಲು ಮಾರ್ಗದರ್ಶನ ನೀಡಿದರು.
ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ಹೆಚ್.ವಿ. ನಾಗರಾಜು ಹಾಗೂ ನಿರ್ಮಿತಾ ಮಂದಣ್ಣ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳ ವಿತರಣೆ
ಒಡೆಯನಪುರ, ಸೆ. 3: ಬೆಂಗಳೂರಿನ ಯೂತ್‍ಫಾರ್ ಸೇವಾ ಸಂಸ್ಥೆ ವತಿಯಿಂದ ಹಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 83 ವಿದ್ಯಾರ್ಥಿಗಳಿಗೆ ಉಚಿತ ವಾಗಿ ಶಿಕ್ಷಣ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಯೂತ್‍ಫಾರ್ ಸೇವಾ ಸಂಸ್ಥೆಯ ಎಸ್. ಆರ್. ನಂದೀಶ್, ವಕೀಲ ಎಸ್. ಜೆ. ಹೇಮಚಂದ್ರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಚ್.ಕೆ. ಸುಶೀಲ ಅವರುಗಳು ಸೇವೆಗಾಗಿ ಮೀಸಲಿಡುತ್ತಿ ರುವ ಕಾರ್ಯ ಶ್ಲಾಘನಿಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಎಂ. ಪಿ. ನಾಗೇಶ್, ಎಚ್. ಡಿ. ರಂಜಿತ್ ಎಸ್‍ಡಿಎಂಸಿ ಅಧ್ಯಕ್ಷ ಲೋಕೇಶ್, ದೈಹಿಕ ಶಿಕ್ಷಣ ಶಿಕ್ಷಕಿ ಸುನಂದ, ಶಿಕ್ಷಕರಾದ ಎಂ.ಎಂ.ಪ್ಯಾರಿ, ರಾಧ, ಮಂಜುಳ, ವಿಕ್ರಾಂತ್, ರವಿ ಮುಂತಾದವರು ಇದ್ದರು.
ಮುಳ್ಳುಸೋಗೆಯಲ್ಲಿ ವನಮಹೋತ್ಸವ
ಕೂಡಿಗೆ, ಸೆ. 3: ಮುಳ್ಳುಸೋಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಕಾವಲುಪಡೆಯ ವತಿಯಿಂದ ವನಮಹೋತ್ಸವ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಉಪ ವಲಯ ಅರಣ್ಯ ಅಧಿಕಾರಿ ಫೀರೋಜ್ ಖಾನ್, ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ತಿಳಿಸಿದರು. ಕರ್ನಾಟಕ ಕಾವಲುಪಡೆ ಜಿಲ್ಲಾ ಅಧ್ಯಕ್ಷ ಎಂ. ಕೃಷ್ಣ, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ನಮನ್ ನಾಯಕ್, ಸಂಪನ್ಮೂಲ ವ್ಯಕ್ತಿ ಗೋವಿಂದರಾಜ್, ಮುಖ್ಯ ಶಿಕ್ಷಕಿ ಎಚ್.ಎಂ. ಸುಶೀಲ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮೈಮುನ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರೋಟರಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡುಗೆ
ಮಡಿಕೇರಿ, ಸೆ. 3: ಗೋಣಿಕೊಪ್ಪಲು ರೋಟರಿ ಕ್ಲಬ್‍ನಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಶಿಕ್ಷಣಕ್ಕೆ ರೋಟರಿ ಸಂಸ್ಥೆ ಆದ್ಯತೆ ನೀಡುತ್ತಲೇ ಬಂದಿದ್ದು, ಪ್ರಕೃತಿ ವಿಕೋಪಕ್ಕೀಡಾದಾಗಲೂ ಸಂಕಷ್ಟದಲ್ಲಿದ್ದ ಕುಟುಂಬಗಳ ಮಕ್ಕಳಿಗೆ ನೆರವು ನೀಡಿದೆ. ಶಿಕ್ಷಣ ಶುಲ್ಕವನ್ನೂ ರೋಟರಿ ಸದಸ್ಯರು ಪಾವತಿಸಿ ಸಹಾಯಕ್ಕೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು. ಗೋಣಿಕೊಪ್ಪ ರೋಟರಿ ಅಧ್ಯಕ್ಷ ಕಾಡ್ಯಮಾಡ ನೆವೀನ್ ಮಾತನಾಡಿ, ದೆಹಲಿಯ ಓರೆಕಲ್ ಸಂಸ್ಥೆ ಮತ್ತು ಪ್ರಥಮ್ ಪಬ್ಲಿಕೇಶನ್ಸ್ ಅವರು ರೋಟರಿ ಸದಸ್ಯರಾದ ಅರುಣ್ ತಮ್ಮಯ್ಯ ಮೂಲಕ 3500 ಪುಸ್ತಕಗಳನ್ನು ಗೋಣಿಕೊಪ್ಪ ರೋಟರಿಗೆ ನೀಡಿದ್ದು, ಈ ಪುಸ್ತಕಗಳನ್ನು ವಿವಿಧ ರೋಟರಿ ಸಂಸ್ಥೆಗಳ ಮೂಲಕ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ವಿತರಿಸಲಾಗುತ್ತಿದೆ. ವಿಜ್ಞಾನ, ಆಂಗ್ಲ, ಗಣಿತ ಹಾಗೂ ಸಾಮಾನ್ಯ ಜ್ಞಾನ ಸಂಬಂಧಿತ ಪುಸ್ತಕಗಳು ಶಾಲಾ ಗ್ರಂಥ ಭಂಡಾರಕ್ಕೆ ಆಸ್ತಿಯಾಗಲಿದೆ ಎಂದು ಮಾಹಿತಿ ನೀಡಿದರು..
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್.ಜಗದೀಶ್ ಪ್ರಶಾಂತ್ ಪುಸ್ತಕ ಸ್ವೀಕರಿಸಿ ಮಾತನಾಡಿದರು. ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಟಿ.ಬಿ. ಪೂಣಚ್ಚ, ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಮಾಜಿ ಸಹಾಯಕ ಗವರ್ನರ್ ಡಾ. ಚಂದ್ರಶೇಖರ್, ರೀಟಾ ದೇಚಮ್ಮ ಸೇರಿದಂತೆ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿದ್ದರು.
ಕಾರ್ಖಾನೆಗೆ ಭೇಟಿ
ವೀರಾಜಪೇಟೆ, ಸೆ. 3 : ಸ. ಪ್ರ. ದರ್ಜೆ ಕಾಲೇಜು, ರೋವರ್ಸ್ ಮತ್ತು ರೇಂಜರ್ಸ್ ಘಟಕವು ರೋವರ್ ಲೀಡರ್ ವನಿತ್ ಕುಮಾರ್ ಮಾರ್ಗದರ್ಶನದಲ್ಲಿ, ರೋವರ್ ಮೆಟ್ ತಮ್ಮಯ್ಯ ನೇತೃತ್ವದಲ್ಲಿ ಗೋಣಿಕೊಪ್ಪ ಕೊಡಗು ಕಿತ್ತಳೆ ಬೆಳೆಗಾರರ ಸಂಘದ ಜ್ಯೂಸ್ ಕಾರ್ಖಾನೆಗೆ ಭೇಟಿ ನೀಡಿದರು. ಕಿತ್ತಳೆ, ದ್ರಾಕ್ಷೆ, ಅನಾನಾಸು, ಮೊದಲಾದ ಹಣ್ಣುಗಳ ಸಂಸ್ಕರಣೆ, ಹಣ್ಣಿನ ರಸ ಉತ್ಪಾದನೆ ಚಟುವಟಿಕೆಗಳ ಮಾಹಿತಿಯನ್ನು ತಿಳಿದುಕೊಂಡರು. ವೀರಾಜಪೇಟೆ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಿರಣ್ ಬೆಂಕಿ ನಂದಿಸಲು ಬಳಸುವ ವಸ್ತುಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ವಿಜೇತರಿಗೆ ಬಹುಮಾನ ವಿತರಣೆ
ಸೋಮವಾರಪೇಟೆ ಸೆ. 3 : ಓಎಲ್‍ವಿ ಶಾಲಾ ಮೈದಾನದಲ್ಲಿ ನಡೆದ ವಲಯ ಮಟ್ಟದ ಅಂತರ್ ಶಾಲಾ ವಿದ್ಯಾರ್ಥಿಗಳ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಜ್ಞಾನವಿಕಾಸ ಶಾಲೆಯ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ಖೋ-ಖೋ, ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ, ಬಾಲಕಿಯರ ವಿಭಾಗದ ವಾಲಿಬಾಲ್‍ನಲ್ಲಿ ಪ್ರಥಮ, ಕಬಡ್ಡಿಯಲ್ಲಿ ದ್ವಿತೀಯ, ಖೋ-ಖೋ ಸ್ಪರ್ಧೆಯಲ್ಲಿ ದ್ವಿತೀಯ, ವಿದ್ಯಾರ್ಥಿನಿಯರ ವಿಭಾಗದ ಚೆಸ್ ಪಂದ್ಯಾಟ ದಲ್ಲಿ ಪ್ರಥಮ, ಬಾಲಕರ ವಿಭಾಗದ ಚೆಸ್‍ನಲ್ಲಿ ಪ್ರಥಮ, ಶಟಲ್ ಬ್ಯಾಡ್ಮಿಂಟನ್‍ನಲ್ಲಿ ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸ ಲಾಯಿತು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಕವಿತ ಸೇರಿದಂತೆ ಶಿಕ್ಷಕರು, ಶಾಲಾ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಶಾಲೆಗಳಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ
ಒಡೆಯನಪುರ, ಸೆ. 3: ಸಮಿಪದ ಆಲೂರು ಸಿದ್ದಾಪುರ ಮಳೆ ಮಲ್ಲೇಶ್ವರ ರೋಟರಿ ಕ್ಲಬ್ ವತಿಯಿಂದ ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಸರಕಾರಿ ಗಿರಿಜನರ ಆಶ್ರಮ ಪ್ರಾಥಮಿಕ ಶಾಲೆಗೆ ಉಚಿತವಾಗಿ ಪ್ರಥಮ ಚಿಕಿತ್ಸೆ ಕಿಟ್‍ಗಳನ್ನು ವಿತರಿಸಲಾಯಿತು.
ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲೇಶ್ವರ ರೋಟರಿ ಕ್ಲಬ್ ಕಾರ್ಯದರ್ಶಿ ಸಂಪತ್‍ಕುಮಾರ್-ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಹಳಷ್ಟು ಜನರು ಇಂದು ಅತಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಕೆಲವು ಮಂದಿ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಚ್.ಇ.ತಮ್ಮಯ್ಯ ಮಾತನಾಡಿ-ರೋಟರಿ ಕ್ಲಬ್ ಅಂತಾರ್ರಾಷ್ಟ್ರೀಯ ಮಟ್ಟದ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಂಸ್ಥೆಯಾಗಿದೆ ಎಂದರು. ಆಲೂರುಸಿದ್ದಾಪುರ ರೋಟರಿ ಕ್ಲಬ್ ಈಗಷ್ಟೇ ಸ್ಥಾಪನೆಯಾಗಿದ್ದು, ಸೇವೆ ನೀಡುವ ಚಿಂತನೆಯನ್ನಿಟ್ಟು ಕೊಂಡಿರುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸ ಬೇಕೆಂದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ದೇವೇಂದ್ರ ಅಧ್ಯಕ್ಷತೆವಹಿಸಿ ಮಾತನಾಡಿದರು. ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿಯನ್ಸ್‍ಗಳಾದ ಎಸ್.ಜೆ. ಪ್ರಸನ್ನಕುಮಾರ್, ಎಂ.ಇ. ವೆಂಕಟೇಶ್, ಟಿ.ಪಿ. ವಿಜಯ್, ಪಿ.ಎನ್. ಗಂಗಾಧರ್, ಎಚ್.ಜಿ. ಲೋಕೇಶ್, ಜಾನಕಿ ಗಂಗಾಧರ್ ಶಾಲಾ ಸಹ ಶಿಕ್ಷಕ ಗಿರೀಶ್, ಪ್ರಮುಖರಾದ ಪ್ರಸನ್ನ, ಅಂಗನವಾಡಿ ಶಿಕ್ಷಕಿ ವೇದಕುಮಾರಿ, ಆಶ್ರಮ ಶಾಲೆ ಶಿಕ್ಷಕಿಯರು ಹಾಜರಿದ್ದರು. -ವಿ.ಸಿ. ಸುರೇಶ್
ಶಾಲಾ ಮಕ್ಕಳ ಸೇವೆಯಲ್ಲಿ ಗುಲ್ಜರ್ ಬಾಯ್...
ಕುಶಾಲನಗರ, ಸೆ. 3: ಕುಶಾಲನಗರ ಪಟ್ಟಣದಲ್ಲಿ ರಸ್ತೆ ದಾಟುವ ಸಂದರ್ಭ ಮಕ್ಕಳಿಗೆ ಶಾಲೆಗೆ ತೆರಳಲು ದಿನನಿತ್ಯ ಸಹಕರಿಸುತ್ತಿರುವ ಸ್ಥಳೀಯ ಆಟೋ ಚಾಲಕರೊಬ್ಬರು ಮಕ್ಕಳು ಅಪಘಾತಕ್ಕೆ ಸಿಲುಕುವದನ್ನು ತಪ್ಪಿಸಲು ಹರಸಾಹಸ ಪಡುತ್ತಿರುವ ಕಾಯಕವೊಂದು ಸ್ಥಳೀಯರ ಗಮನ ಸೆಳೆಯುತ್ತಿದೆ.
ಕುಶಾಲನಗರ-ಮೈಸೂರು ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗ ಸರಕಾರಿ ಶಾಲೆಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬರುತ್ತಿದ್ದು, ಈ ಸಂದರ್ಭ ವಾಹನಗಳ ಒತ್ತಡದ ನಡುವೆ ಮಕ್ಕಳಿಗೆ ರಸ್ತೆ ದಾಟಲು ಅನಾನುಕೂಲ ಉಂಟಾಗುತ್ತಿದೆ. ಈ ನಡುವೆ ಸ್ಥಳದಲ್ಲಿ ಸಂಚಾರಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‍ಗಳನ್ನು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭ ಸ್ಥಳಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಅನಾನುಕೂಲ ಕಂಡ ಆಟೋ ಚಾಲಕ ಗುಲ್ಜರ್ ಬಾಯ್ ತನ್ನ ಮನೆಯಿಂದ ಹಾಲು ಕ್ಯಾನ್‍ಗಳು, ಡ್ರಂ, ಮತ್ತಿತರ ವಸ್ತುಗಳನ್ನು ತಂದು ರಸ್ತೆಯ ವಿಭಜಕಗಳಾಗಿ ಇಡುವದರೊಂದಿಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸುತ್ತಿದ್ದ ದೃಶ್ಯ ‘ಶಕ್ತಿ’ಯ ಗಮನ ಸೆಳೆಯಿತು. ಗುಲ್ಜರ್ ಬಾಯ್ ಕಳೆದ ಹಲವು ವರ್ಷಗಳಿಂದ ಬೆಳಿಗ್ಗೆ ಶಾಲೆ ಪ್ರಾರಂಭವಾಗುವ 1 ಗಂಟೆಗೆ ಮುನ್ನ ರಸ್ತೆಯಲ್ಲಿ ನಿಂತು ಮಕ್ಕಳನ್ನು ಶಾಲೆಗೆ ದಾಟಿಸುವ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಆದಷ್ಟು ಬೇಗನೆ ಸಂಚಾರಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಮತ್ತೆ ಅದೇ ಜಾಗದಲ್ಲಿ ತಂದಿರಿಸಬೇಕೆಂಬದು ಗುಲ್ಜರ್ ಬಾಯ್ ಮತ್ತು ಮಕ್ಕಳ ಪೋಷಕರ ಆಗ್ರಹವಾಗಿದೆ.
-ಸಿಂಚು
ರೋಟರಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡುಗೆ
ಮಡಿಕೇರಿ, ಸೆ. 3: ಗೋಣಿಕೊಪ್ಪಲು ರೋಟರಿ ಕ್ಲಬ್‍ನಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಶಿಕ್ಷಣಕ್ಕೆ ರೋಟರಿ ಸಂಸ್ಥೆ ಆದ್ಯತೆ ನೀಡುತ್ತಲೇ ಬಂದಿದ್ದು, ಪ್ರಕೃತಿ ವಿಕೋಪಕ್ಕೀಡಾದಾಗಲೂ ಸಂಕಷ್ಟದಲ್ಲಿದ್ದ ಕುಟುಂಬಗಳ ಮಕ್ಕಳಿಗೆ ನೆರವು ನೀಡಿದೆ. ಶಿಕ್ಷಣ ಶುಲ್ಕವನ್ನೂ ರೋಟರಿ ಸದಸ್ಯರು ಪಾವತಿಸಿ ಸಹಾಯಕ್ಕೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು. ಗೋಣಿಕೊಪ್ಪ ರೋಟರಿ ಅಧ್ಯಕ್ಷ ಕಾಡ್ಯಮಾಡ ನೆವೀನ್ ಮಾತನಾಡಿ, ದೆಹಲಿಯ ಓರೆಕಲ್ ಸಂಸ್ಥೆ ಮತ್ತು ಪ್ರಥಮ್ ಪಬ್ಲಿಕೇಶನ್ಸ್ ಅವರು ರೋಟರಿ ಸದಸ್ಯರಾದ ಅರುಣ್ ತಮ್ಮಯ್ಯ ಮೂಲಕ 3500 ಪುಸ್ತಕಗಳನ್ನು ಗೋಣಿಕೊಪ್ಪ ರೋಟರಿಗೆ ನೀಡಿದ್ದು, ಈ ಪುಸ್ತಕಗಳನ್ನು ವ�