ಮಡಿಕೇರಿ, ಸೆ. 3: ಕರ್ನಾಟಕ ಬೆಳೆಗಾರರ ಒಕ್ಕೂಟವು “ಬೆಳೆಗಾರರೆಡೆಗೆ ನಮ್ಮ ನೆಡಿಗೆ” ಎಂಬ ದ್ಯೇಯ ವಾಕ್ಯದಡಿಯಲ್ಲಿ ಅತೀವೃಷ್ಟಿಯಿಂದ ಸಂಕಷ್ಟದಲ್ಲಿರುವ ಬೆಳೆಗಾರರ ಅನುಕೂಲಕ್ಕಾಗಿ ತಾ. 5ರಂದು ಸಕಲೇಶಪುರದ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಕಾಳುಮೆಣಸು ಕೃಷಿ ಕುರಿತಾದ ವಿಚಾರ ಸಂಕೀರಣ ವೊಂದನ್ನು ಆಯೋಜಿಸಿದೆ.

ಈ ಮೂಲಕ ಬೆಳೆಗಾರ ರೊಂದಿಗೆ ಕಾಳುಮೆಣಸು ಕೃಷಿಯಲ್ಲಿ ಸಾಧನೆಗೈದಿರುವ ತಜ್ಞರು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.