ವೀರಾಜಪೇಟೆ, ಸೆ.3: ಸೆ.1ರಂದು ವೀರಾಜಪೇಟೆ ವಿಭಾಗಕ್ಕೆ ಸುರಿದ ಮಳೆಗೆ ಇಲ್ಲಿನ ನೆಹರೂನಗರದ ಕೆಳ ಭಾಗದ ಮಣ್ಣಿನ ಬರೆಗೆ ನಿರ್ಮಿಸಿದ್ದ ಭಾರೀ ತಡೆಗೋಡೆಯ ಒಂದು ಭಾಗ ಕುಸಿದ ಪರಿಣಾಮ ತಡೆಗೋಡೆಯ ಕೆಳ ಭಾಗದಲ್ಲಿದ್ದ ಮುರುಗೇಶ್ ಎಂಬವರ ಮನೆಯ ಒಂದು ಭಾಗದ ಗೋಡೆ ಕುಸಿದು ಮನೆ ಪೂರ್ಣ ಜಖಂಗೊಂಡಿದೆ. ಇನ್ನು ಏಳು ಮನೆಗಳು ಅಪಾಯದ ಅಂಚಿನಲ್ಲಿದ್ದು ತಡೆಗೋಡೆಯ ಕುಸಿತ ಮುಂದುವರೆದರೆ ಉಳಿದ ಮನೆಗಳು ನೆಲಸಮಗೊಳ್ಳುವ ಸಾಧ್ಯತೆ ಇರುವದರಿಂದ ತಡೆಗೋಡೆಯ ಕೆಳ ಭಾಗದಲ್ಲಿರುವ 7 ಕುಟುಂಬಗಳನ್ನು ತಾಲೂಕು ಆಡಳಿತ ತುರ್ತಾಗಿ ಸ್ಥಳಾಂತರಿಸುವ ಕ್ರಮ ಕೈಗೊಂಡಿದೆ.