ಮಡಿಕೇರಿ, ಸೆ. 1: ಭಾರತೀಯ ವಿದ್ಯಾಭವನ, ಸ್ಪಿಕ್‍ಮೆಕೆ ವತಿಯಿಂದ ತಾ. 3 ರಂದು ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪಶ್ಚಿಮಬಂಗಾಲದ ಆಕರ್ಷಣೀಯ ಚೌ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ.

ಅಂದು ಸಂಜೆ 6.30 ಕ್ಕೆ ಪಶ್ಚಿಮ ಬಂಗಾಲದ ಪುರುಲಿಯಾ ಪಟ್ಟಣದ ಥರಪದ ರಾಜಕ್ ಮತ್ತು ತಂಡಕ್ಕೆ ಸೇರಿದ 35 ಜಾನಪದ ನೃತ್ಯ ಕಲಾವಿದರು ಈ ವಿಶಿಷ್ಟ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಚೌ ನೃತ್ಯ ಸಮರ ಕಲಾ ನೃತ್ಯವಾಗಿದ್ದು, ಒಡಿಸ್ಸಾ, ಪಶ್ಚಿಮಬಂಗಾಲ, ಜಾರ್ಖಂಡ್ ರಾಜ್ಯಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಜಾನಪದ ಕಲೆಯಾಗಿದೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ನೃತ್ಯ ಪ್ರದರ್ಶನ ಆಯೋಜಿತವಾಗಿರುತ್ತದೆ. ದೇಶ - ವಿದೇಶಗಳಲ್ಲಿ ಚೌ ನೃತ್ಯ ಪ್ರದರ್ಶನ ನೀಡಿರುವ ತಂಡ ಇದೇ ಮೊದಲ ಬಾರಿಗೆ ಕೊಡಗಿನ ಮಡಿಕೇರಿಯಲ್ಲಿ ಭಾರತದ ಈ ವಿಶಿಷ್ಟ ನೃತ್ಯ ಪ್ರಕಾರವನ್ನು ಪ್ರದರ್ಶಿಸಲಿದೆ ಎಂದು ಭಾರತೀಯ ವಿದ್ಯಾಭವನದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.