ಅಮ್ಮತ್ತಿ ಬಸವೇಶ್ವರ ದೇಗುಲದಲ್ಲಿ ಗಣೇಶೋತ್ಸವ

ಮಡಿಕೇರಿ, ಆ. 31: ಅಮ್ಮತ್ತಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಗೌರಿ ಗಣೇಶೋತ್ಸವದ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದೆ. ತಾ.1ರಂದು (ಇಂದು) ಬೆಳಿಗ್ಗೆ 8 ಗಂಟೆಗೆ ಶ್ರೀ ಸ್ವರ್ಣ ಗೌರಿ ಆಗಮನ, ತಾ. 2ರಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ಗಣೇಶಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ತಾ. 3ರಿಂದ 13ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಭಕ್ತಾದಿಗಳಿಂದ ಅಲಂಕಾರ ಪೂಜೆ ನಡೆಯಲಿದೆ. ತಾ. 14ರಂದು ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಬಾಳುಮನಿ ಉತ್ಸವ : ಟಾಟಾ ಕಾಪಿ ಸಂಸ್ಥೆಗೆ ಸೇರಿದ ತಿತಿಮತಿ ಮುಖ್ಯ ರಸ್ತೆಯಲ್ಲಿರುವ ಬಾಳುಮನಿ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತಾ. 2ರಂದು (ನಾಳೆ) ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವದು. ಏಳು ದಿನಗಳ ನಿತ್ಯ ಪೂಜೆಗಳ ಬಳಿಕ ತಾ. 8ರಂದು ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿ ವಿಸರ್ಜಿಸ ಲಾಗುವದು ಎಂದು ಕ್ಷೇತ್ರಾಧಿಕಾರಿ ಚಂಗುಲಂಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.

ಗೋಣಿಕೊಪ್ಪ ವರದಿ : ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದಲ್ಲಿ ತಾ. 1ರಿಂದ ಗೌರಿ ಗಣೇಶ ಉತ್ಸವ ಆರಂಭಗೊಂಡು, ತಾ. 5 ರಂದು ರಾತ್ರಿ 7 ಗಂಟೆಗೆ ವಿಸರ್ಜನೆ ಮಾಡಲಾಗುತ್ತದೆ.

ತಾ. 1 ರಂದು ಸ್ವರ್ಣಗೌರಿ ಮೂರ್ತಿ ಮೆರವಣಿಗೆ ಮೂಲಕ ತಂದು, ಬೆ. 11.30 ಗಂಟೆಗೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮಹಾಪೂಜೆ, ಅನ್ನದಾನ ನಡೆಯುತ್ತದೆ. ತಾ. 2ರಂದು ಬೆ. 7.45ಕ್ಕೆ ಅಷ್ಠೋತ್ತರ ಗಣಹೋಮ, ಮಹಾಪೂಜೆ, 3, 4 ಮತ್ತು 5ರಂದು ಪೂಜೆ ನಡೆಯುತ್ತದೆ. 5ರಂದು ಸಂಜೆ 4 ಗಂಟೆಗೆ ಮೆರವಣಿಗೆ ಮೂಲಕ ಹೊರಟು ಸೀಗೆತೋಡು ಕೆರೆಯಲ್ಲಿ ರಾತ್ರಿ 7ಕ್ಕೆ ವಿಸರ್ಜನೆ ಮಾಡಲಾಗುವದು.

ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾ.2 ರಂದು ಬೆಳಗ್ಗೆ 9 ಗಂಟೆಯಿಂದ ಪೂಜೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಗಣಹೋಮ, 10.30 ಕ್ಕೆ ಮಹಾಪೂಜೆ ನಡೆಯಲಿದೆ.

ಶ್ರೀಮಂಗಲ: ಶ್ರೀಮಂಗಲ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ತಾ. 1 ರಿಂದ ತಾ. 10ರ ವರೆಗೆ ಗಣೇಶೋತ್ಸವ ಪ್ರಯುಕ್ತ ರಾತ್ರಿ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲಿನ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಗೌರಿ ಪ್ರತಿಷ್ಠಾಪನೆ ಸಂಜೆ 6 ಕ್ಕೆ ನಡೆಯಲಿದೆ. ತಾ. 2 ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಇದರೊಂದಿಗೆ ಗಣಪತಿ ಹೋಮ ನಡೆಯಲಿದೆ.

ತಾ. 3ಕ್ಕೆ ಸಂಜೆ ಪೂಜೆ ನಡೆಯಲಿದೆ. 4 ರಂದು ರಾತ್ರಿ 7 ಗಂಟೆಯಿಂದ ಬೆಂಗಳೂರು ಆರ್ಕೆಸ್ಟ್ರಾ ತಂಡದಿಂದ ಆರ್ಕೆಸ್ಟ್ರಾ, ತಾ. 5 ರಂದು ಸಂಜೆ ಸ್ಥಳೀಯ ಪ್ರತಿಭೆಗಳ ಸಾಂಸ್ಕøತಿಕ ಕಾರ್ಯಕ್ರಮ, 6 ರಂದು ಸರಿಗಮಪ ಖ್ಯಾತಿಯ ಚೆನ್ನಪ್ಪ ತಂಡದಿಂದ ಆರ್ಕೆಸ್ಟ್ರಾ, ತಾ. 7 ರಂದು ಕಾಕೂರು ಬಸವೇಶ್ವರ ಯುವಕ ಸಂಘದಿಂದ ಸಾಂಸ್ಕøತಿಕ ಕಾರ್ಯಕ್ರಮ, 8 ರಂದು ಸ್ಥಳೀಯ ತಂಡದ ಸಾಂಸ್ಕøತಿಕ ಕಾರ್ಯಕ್ರಮ, 9 ರಂದು ಗೋಣಿಕೊಪ್ಪ ಕಾವೇರಿ ಕಲಾಸಿರಿ ತಂಡದಿಂದ ರಸಮಂಜರಿ, 10 ರಂದು ಸರಿಗಮಪ ತಂಡದ ಆರ್ಕೆಸ್ಟ್ರಾ ನಡೆಯಲಿದೆ.

ಪ್ರತಿದಿನ ಸಂಜೆ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮಗಳ ನಂತರ ಅನ್ನದಾನ ನಡೆಯಲಿದೆ ಎಂದು ಶ್ರೀಮಂಗಲ ಗೌರಿ-ಗಣೇಶ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.