ಚೆಟ್ಟಳ್ಳಿ, ಆ. 30: ಚೆಟ್ಟಳ್ಳಿಯ ಖಾಸಗಿ ತೋಟದಲ್ಲಿ ಗುರುವಾರ ಉರುಳಿಗೆ ಸಿಲುಕಿದ್ದ, ಚಿರತೆಯೊಂದು ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅವರ ಮೇಲೆ ಧಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿತ್ತು.
ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಗುರುವಾರ ಪೂರ್ತಿ ದಿನ ಕಾರ್ಯಾಚರಣೆ ನಡೆಸಿದರೂ ಚಿರತೆ ಕಾಣಸಿಗಲಿಲ್ಲ.
ತೋಟಗಳಲ್ಲಿ ಚಿರತೆಯ ಚಲನವಲನಗಳ ಬಗ್ಗೆ ತಿಳಿಯಲು ಇಂದೂ ಕೂಡ ಮೀನುಕೊಲ್ಲಿ ವಲಯ ಅರಣ್ಯಾಧಿಕಾರಿ ವಿಲಾಸ್ ಅವರ ನೇತೃತ್ವದಲ್ಲಿ ಚೆಟ್ಟಳ್ಳಿ ಸುತ್ತುಮುತ್ತಲಿನ ತೋಟಗಳಲ್ಲಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅರಣ್ಯಾಧಿಕಾರಿ ವಿಲಾಸ್ ಈಗಾಗಲೇ ತೋಟಗಳ ಸುತ್ತುಮುತ್ತಲು ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ, ಚಿರತೆಯ ಚಲನವಲನ ಕಂಡಲ್ಲಿ ಗ್ರಾಮಸ್ಥರು ಇಲಾಖೆಗೆ ಮಾಹಿತಿ ನೀಡಿ ಸಹಕರಿಸಿಬೇಕೆಂದು ಕೋರಿದರು.
ಚೆಟ್ಟಳ್ಳಿ ಸುತ್ತಮುತ್ತಲಿನ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಎಚ್ಚರಿಕೆ ಯಿಂದರಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.