ಶ್ರೀಮಂಗಲ, ಆ. 31: ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಕಾಫಿ ಬೆಳೆಗಾರರ ಸಂಘಟನೆಗಳ ನಿಯೋಗದ ಮನವಿ ಪರಿಗಣಿಸಿ ಕಾಫಿ ಬೆಳೆಗಾರರ ಸಮಸ್ಯೆ ಆಲಿಸಲು ಕೇಂದ್ರ ವಾಣಿಜ್ಯ ಸಚಿವಾಲ ಯದಿಂದ ಇಬ್ಬರು ಕಾರ್ಯದರ್ಶಿ ಗಳನ್ನು ಕಾಫಿ ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರ ಸಂಘಟನೆಗಳಿಂದ ಸಿದ್ಧತೆಗಾಗಿ ಪೂರ್ವಭಾವಿ ಸಭೆ ನಡೆಸಿ ಎಲ್ಲಾ ಕಾಫಿ ಬೆಳೆಗಾರರನ್ನು ಪ್ರತಿನಿಧಿಸುವ ಸಂಘಟನೆಗಳು ಒಂದೇ ವೇದಿಕೆಯಡಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಒಮ್ಮತದ ನಿರ್ಧಾರ ಕೈಗೊಂಡವು.ಸಕಲೇಶಪುರದ ಹೆಚ್.ಡಿ.ಪಿ.ಎ. ಸಭಾಂಗಣದಲ್ಲಿ ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ಬೋಜೇಗೌಡ ಅವರು ಏರ್ಪಡಿಸಿದ್ದ ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ, ಯುನೈಟೆಡ್ ಪ್ಲಾಂಟರ್ಸ್ ಅಸೋಸಿ ಯೇಷನ್ ಆಫ್ ಇಂಡಿಯಾದ (ಉಪಾಸಿ) ಕಾಫಿ ಸಮಿತಿ ಅಧ್ಯಕ್ಷರು, ಹಾಸನ ಪ್ಲಾಂಟರ್ಸ್ ಅಸೋಸಿ ಯೇಷನ್, ಕೊಡಗು ಬೆಳೆಗಾರರ ಒಕ್ಕೂಟ, ಕೊಡಗು ಪ್ಲಾಂಟರ್ ಅಸೋಸಿಯೇಷನ್, ಕೊಡಗು ಬೆಳೆಗಾರರ ಸಂಘ, ಕ್ಯಾಪೆÇ್ಗೀ ಸಂಘಟನೆಯ ಸಂಚಾಲಕರು ಸೇರಿದಂತೆ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಬೆಳೆಗಾರರನ್ನು ಪ್ರತಿನಿಧಿಸುವ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಚರ್ಚಿಸಿ ಸಂಘಟನೆಗಳು ಸೇರಿ ಒಂದೇ ವೇದಿಕೆಯಡಿ ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲು ನಿರ್ಣಯ ಕೈಗೊಂಡವು.

ರಾಜ್ಯಕ್ಕೆ ಆಗಮಿಸುತ್ತಿರುವ ವಾಣಿಜ್ಯ

(ಮೊದಲ ಪುಟದಿಂದ) ಸಚಿವಾಲಯದ ಕಾರ್ಯದರ್ಶಿಗಳಿಗೆ ಎಲ್ಲ ಸಂಘಟನೆಗಳು ಒಂದಾಗಿ ಒಂದೇ ಮನವಿ ಪತ್ರವನ್ನು ಸಲ್ಲಿಸಲು ಒಮ್ಮತದ ನಿರ್ಧಾರ ಕೈಗೊಂಡರು. ಕಾರ್ಯದರ್ಶಿಗಳಿಗೆ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಮನವರಿಕೆ ಮಾಡಲು ಸಂಘಟನೆಗಳು ಒಂದಾಗಿ ಕಾರ್ಯ ನಿರ್ವಹಿಸುವದು ಸೂಕ್ತ. ಕಾಫಿ ಬೆಳೆಯುವ ಸಂಘಟನೆಗಳು ಪ್ರತ್ಯೇಕವಾಗಿ ಮನವಿ ಸಲ್ಲಿಸುತ್ತಿರುವದ ರಿಂದ ಸರ್ಕಾರಕ್ಕೆ ಗೊಂದಲ ಉಂಟಾಗಲಿದೆ. ಆದ್ದರಿಂದ ಎಲ್ಲಾ ವರ್ಗದ ಬೆಳೆಗಾರರು ಹಾಗೂ ಎಲ್ಲಾ ಪ್ರದೇಶದ ಬೆಳೆಗಾರರನ್ನು ಒಟ್ಟುಗೂಡಿಸಿ ಅವರ ಅಹವಾಲುಗಳನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.