ಗೋಣಿಕೊಪ್ಪ, ಆ. 31: ಇಲ್ಲಿನ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪಿ.ಎ. ಬೆಳ್ಯಪ್ಪ. ತೃತೀಯ ಬಿ.ಕಾಂ, ಸಾಮಾನ್ಯ ಕಾರ್ಯದರ್ಶಿಯಾಗಿ ಸಿ.ಬಿ. ದೇವಯ್ಯ. ತೃತೀಯ ಬಿಸಿಎ, ಜಂಟಿ ಕಾರ್ಯದರ್ಶಿ ಯಾಗಿ ವಿ.ಎಸ್. ಲಿಖಿತ್. ದ್ವಿತೀಯ ಬಿಸಿಎ ಮತ್ತು ಬಿ.ಯು. ಯಶಿಕ. ದ್ವಿತೀಯ ಬಿಬಿಎ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಎಂ.ಕೆ. ದೇಚಮ್ಮ. ತೃತೀಯ ಬಿ.ಕಾಂ, ಕ್ರೀಡಾ ಕಾರ್ಯದರ್ಶಿಯಾಗಿ ಎ.ಎಂ. ಹೇಮಂತ್. ತೃತೀಯ ಬಿಎ ಆಯ್ಕೆಯಾದರು. ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಚುನಾವಣೆ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಪ್ರೊ. ಎಂ.ಬಿ. ಕಾವೇರಪ್ಪ ಕಾರ್ಯ ನಿರ್ವಹಿಸಿದರು. ಪ್ರಾಂಶುಪಾಲರಾದ ಪ್ರೊ. ಕುಸುಮಾಧರ್ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಸಿ.ಪಿ. ಸುಜಯ ಇದ್ದರು.