ವೀರಾಜಪೇಟೆ, ಅ. 29: ನಿರಾಶ್ರಿತರಿಗೆ ವಿತರಿಸಲಾಗುವ ಪರಿಹಾರ ಧನ ವಿತರಣೆಯಲ್ಲಿ ಅಧಿಕಾರಿಗಳು ದ್ವಿಮುಖ ದೋರಣೆ ಮಾಡುತ್ತಿದ್ದಾರೆ ಎಂದು ಬಬ್ಬರಾಡ್ ಗ್ರಾಮಸ್ಥರು ಅರೋಪ ಮಾಡಿದರು.

ವೀರಾಜಪೇಟೆ ತಾಲೂಕು ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮರ ವಾರ್ಡ್‍ಗೆ ಸೇರಿದ ಬಬ್ಬರಾಡ್ ಮತ್ತು ಕುಪ್ಪಮೊಟ್ಟೆ ಎಂಬ ಗ್ರಾಮ ವ್ಯಾಪ್ತಿಯಲ್ಲಿರುವ ಸುಮಾರು 58 ಕುಟುಂಬಗಳಿಗೆ ಪರಿಹಾರ ಧನ ಲಭಿಸಿರುವದಿಲ್ಲ ಎಂದು ಅಲ್ಲಿನ ನಿವಾಸಿಗಳ ಅರೋಪವಾಗಿದೆ.

ಈ ಸ್ಥಳದಲ್ಲಿ ಒಟ್ಟು 58 ಕುಟುಂಬಗಳಿದ್ದು, ಬಬ್ಬರಾಡ್ ಮತ್ತು ಕುಪ್ಪಮೊಟ್ಟೆ-ಪಡಚ್ಚಿಕಾಡು ಜಂಕ್ಷನ್ ಸ್ಥಳಕ್ಕೆ ಸಂಚಾರ ಮಾಡಲು ಕಿರು ಸೇತುವೆಯೆ ಮೂಲದಾರ. ಕಿರು ಹೊಳೆಯು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ ಹೊಳೆಯನ್ನು ದಾಟಲು ಜೀವ ಭಯದಿಂದ ಸಂಚರಿಸಬೇಕು. ಇದೇ ತಿಂಗಳಲ್ಲಿ ಮೊದಲವಾರದಲ್ಲಿ ಬಿದ್ದ ಭಾರಿ ಮಳೆಗೆ ಕಿರು ಹೊಳೆಯು ತುಂಬಿ ಹರಿದ ಪರಿಣಾಮ ಸೇತುವೆಯು ಕುಸಿದು ಸಂಪರ್ಕ ಕಡಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಬ್ಬರಾಡ್ ಮತ್ತು ಕುಪ್ಪಮೊಟ್ಟೆಯ 58 ಕುಟುಂಬಗಳು ಸಂಪರ್ಕ ಸೇತುವೆ ಕುಸಿದ ಕಾರಣದಿಂದ ಹೊರಗಿನ ಸಂಪರ್ಕವೇ ಇಲ್ಲಾದಂತಾಗಿತ್ತು. ಸರ್ಕಾರವು ಪರಿಹಾರ ಕೇಂದ್ರದಲ್ಲಿ ತಂಗಿದ್ದ ನಿರಾಶ್ರಿತರನ್ನು ಪರಿಗಣಿಸಿ ಮತ್ತು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದ್ದ ನಿರಾಶ್ರಿತರಿಗೆ ಪರಿಹಾರ ಧನ ಸಹಾಯ ನೀಡಿದೆ. ಈ ಭಾಗದಲ್ಲಿ ನೆಲೆಸಿರುವ ಕುಟುಂಬಗಳಿಗೆ ಸಂಪರ್ಕ ಸೇತುವೆ ಕಡಿತಗೊಂಡಿದ್ದರಿಂದ ಸರ್ಕಾರದ ಯಾವದೇ ಸೌಲಭ್ಯಗಳು ಮತ್ತು ಪರಿಹಾರ ಧನವು ಲಭಿಸಿರುವದಿಲ್ಲ. ಈ ಸಂಬಂಧ ಇಲ್ಲಿನ ನಿವಾಸಿಗಳು ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಲಿಖಿತ ದೂರ ನೀಡಿದ್ದಾರೆ.

ಪಂಚಾಯಿತಿಯು ಸ್ಥಳ ಪರಿಶೀಲನೆ ಮಾಡಿದ್ದು ನಿವಾಸಿಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದೆ. ತೋರ ಗ್ರಾಮ ಕೊರ್ತಿಕಾಡು ಭೂ ಕುಸಿತವಾದ ಸ್ಥಳಕ್ಕೆ ಭೇಟಿ ಮಾಡಿದ ಕೊಡಗು ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಮತ್ತು ಇತ್ತೀಚೆಗೆ ಅಗಮಸಿದ ಸಂಸದರಿಗೂ ಮೌಖಿಕವಾಗಿ ಮಾಹಿತಿಯನ್ನು ಒದಗಿಸಲಾಗಿದೆ. ಇಲ್ಲಿ ನೆಲೆಸಿರುವ ಶೇ. 100 ರಷ್ಟು ಮಂದಿ ಕೂಲಿ ಅವಲಂಭಿತರಾಗಿದ್ದಾರೆ.

23 ಮಂದಿ 5 ವರ್ಷ ಪ್ರಾಯದಿಂದ ಕಾಲೇಜುವರಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಸೇತುವೆ ಕಡಿತದಿಂದ ಶಾಲಾ-ಕಾಲೇಜಿಗೆ ತೆರಳು ಸಾಧ್ಯವಾಗಿಲ್ಲ. ಹಲವು ದಿನಗಳಿಂದ ಕೂಲಿ ಕೆಲಸವು ಇಲ್ಲ. ಸನಿಹದ ತೋಟದ ಮಾಲೀಕರು ಕೆಲಸಕ್ಕೂ ಕರೆಯುತ್ತಿಲ್ಲ, ಹಣದ ಅಭಾವವಿದೆ. ಮಳೆಯ ಕಾರಣದಿಂದಾಗಿ ಕೂಲಿ ಕೆಲಸ ಕಡಿತಗೊಂಡಿತ್ತು ಸ್ವಸಹಾಯ ಸಂಘ ಮತ್ತು ವಿ.ಎಸ್.ಎಸ್.ಎನ್. ಬ್ಯಾಂಕ್‍ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡುವಂತೆ ಅಧಿಕಾರಿಗಳು ಒತ್ತಾಯ ಮಾಡುತಿದ್ದಾರೆ. ಸರ್ಕಾರವು ನಮಗಳನ್ನು ಇತರ ನಿರಾಶ್ರಿತರಂತೆ ಪರಿಗಣಿಸಿ ಸರ್ಕಾರದಿಂದಾಗುವ ಸೌಲಭ್ಯಗಳು ಹಾಗೂ ಪರಿಹಾರ ಧನ ಸಹಾಯವನ್ನು ನೀಡಿ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಬಬ್ಬರಾಡ್ ಮತ್ತು ಕುಪ್ಪು ಮೊಟ್ಟೆ ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. -ಕಿಶೋರ್ ಶೆಟ್ಟಿ