ಸುಂಟಿಕೊಪ್ಪ, ಆ. 29: ಕೆದಕಲ್ ಗ್ರಾಮ ಪಂಚಾಯಿತಿಯಲ್ಲಿ ಶೇ. 25ರ ಅನುದಾನದಲ್ಲಿ ಪರಿಶಿಷ್ಟ ಜಾತಿಯ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜನ ನೀಡುವ ಸಲುವಾಗಿ ಸ್ವಂತ ಉದ್ಯೋಗ ಸಡೆಸುವ ಹರೀಶ್ ಮತ್ತು ರಾಜು ಅವರಿಗೆ ತಲಾ 10 ಸಾವಿರ ರೂಪಾಯಿಗಳ ಪರಿಕರಗಳನ್ನು ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎ. ಬಾಲಕೃಷ್ಣ ವಿತರಿಸಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ, ಉಪಾಧ್ಯಕ್ಷೆ ಲೀಲಾ, ಸದಸ್ಯರಾದ ದೇವಿಪ್ರಸಾದ್ ಕಾಯರ್ಮಾರ್, ಪವಿತ್ರ, ಕಾವೇರಿ ರಮೇಶ, ಹರಿಣಿ, ವೆಂಕಪ್ಪ ಪೂಜಾರಿ, ಸಾರ್ವಜನಿಕರು ಹಾಜರಿದ್ದರು.