ಮಡಿಕೇರಿ, ಆ. 28: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರತಿಷ್ಟಿತ ಪರ್ವತಾರೋಹಣ ಶಾಲೆಯಲ್ಲಿ ಬೇಸಿಕ್ ಪರ್ವತಾರೋಹಣ ವಿಶೇಷ ತರಬೇತಿ ಶಿಬಿರವು ರಾಜ್ಯದ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದ ಸದೃಢ 18 ರಿಂದ 35 ವರ್ಷ ಒಳಪಟ್ಟ ಯುವಕ, ಯುವತಿಯರಿಗೆ ಹಿಮಾಲಯ ತಪ್ಪಲಿನಲ್ಲಿ ಏರ್ಪಡಿಸಲಾಗುವುದು. ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲು ದೈಹಿಕ ಪರೀಕ್ಷೆಯು ಸೆಪ್ಟೆಂಬರ್ 3 ರಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂ. 080-22210454, 9448038220 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.