ಮಡಿಕೇರಿ, ಆ. 28: ಡೆನ್ಮಾರ್ಕ್ ಕನ್ನಡ ಕೂಟದಿಂದ ಪ್ರಕೃತಿ ವಿಕೋಪ ಸಂತ್ರಸ್ತ ಐವರಿಗೆ ತಲಾ 10 ಸಾವಿರ ರೂಪಾಯಿ ಆರ್ಥಿಕ ನೆರವು ಒದಗಿಸಲಾಗಿದೆ. ಹಿರಿಯ ಪತ್ರಕರ್ತ ಜಯ ನಾಣಯ್ಯ, ಟಿವಿ 9 ಕೊಡಗು ಜಿಲ್ಲಾ ವರದಿಗಾರ ಸುರೇಶ್ ಮೂಲಕ ಆಯ್ದ ಐವರಿಗೆ ಪತ್ರಿಕಾ ಭವನದಲ್ಲಿ ಬುಧವಾರ ಪರಿಹಾರ ಹಣ ವಿತರಿಸಲಾಯಿತು.
ಕಟ್ಟೆಮಾಡು ಪರಂಬು ಪೈಸಾರಿ ನಿವಾಸಿಗಳಾದ ಬಿ.ಕೆ. ರೇವತಿ, ಎಚ್.ಪಿ. ಶಿಲ್ಪ, ಬಿ.ಎನ್. ಲತೇಶ್, ಪತ್ರಕರ್ತರಾದ ಉದಯ್ ಮೊಣ್ಣಪ್ಪ, ಆನಂದ್ ಕೊಡಗು ಅವರಿಗೆ ನಗದು ಹಣ ನೀಡಲಾಯಿತು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಉಪಾಧ್ಯಕ್ಷ ಕೆ.ಎ. ಆದಿತ್ಯ, ನಿರ್ದೇಶಕ ಪ್ರೇಮ್‍ಕುಮಾರ್, ಟಿವಿ 9 ವರದಿಗಾರ ಸುರೇಶ್ ಹಣ ವಿತರಿಸಿದರು.