ಸುಬ್ರಮಣಿ, ಸಿದ್ದಾಪುರ
ಸಿದ್ದಾಪುರ, ಆ. 28: ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಕಾವೇರಿ ನದಿ ಉಕ್ಕಿ ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ನದಿ ತೀರದ ಅನೇಕ ಮನೆಗಳು ನೆಲಸಮವಾಗಿದ್ದು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸಿ ನಿರಾಶ್ರಿತರಿಗೆ ಪರಿಹಾರಗಳನ್ನು ನೀಡಿ ಬದುಕು ಕಟ್ಟಿ ಕೊಳ್ಳಲು ಶ್ರಮಿಸುತ್ತಿದ್ದರೆ ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜಾವ್ದಾರಿಯಿಂದ ಅದೆಷ್ಟೋ ಕುಟುಂಬಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿ ಮುಂದಿನ ಬದುಕಿನ ಬಗ್ಗೆ ಕಂಗಾಲಾಗಿದ್ದಾರೆ.
ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದಾಸವಾಳ ಗ್ರಾಮದ 3 ಕುಟುಂಬಗಳು ಮಹಾ ಮಳೆÀಯಿಂದ ಮನೆ ಮಠಗಳನ್ನು ಕಳೆದುಕೊಂಡು ಗ್ರಾ. ಪಂ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಯಾವದೇ ಸೌಲಭ್ಯವಿಲ್ಲದೆ ಅವರುಗಳ ಬದುಕು ಬೀದಿಗೆ ಬಂದಿದೆ. ಸ್ಥಳೀಯ ಗ್ರಾ.ಪಂ. ಇವರಿಗೆ ಯಾವದೇ ಪರಿಹಾರಗಳನ್ನು ನೀಡದೆ ಪರಿಹಾರ ಕೇಂದ್ರಕ್ಕೂ ಕಳುಹಿಸದೆ ಕೈ ಬಿಟ್ಟಿದ್ದು ಅವರು ಸಮೀಪದ ತೋಟದ ಲೈನ್ ಮನೆಯನ್ನು ಬಾಡಿಗೆಗೆ ಪಡೆದು ತಂಗಿದ್ದಾರೆ.
ದಾಸವಾಳ ಗ್ರಾಮದ ವಿಶ್ವನಾಥ್, ರಾಜನ್, ಸಜೀವನ್ ಎಂಬ ಮೂರು ಕುಟುಂಬದವರು ಹಲವಾರು ವರ್ಷಗಳಿಂದ ಅದೇ ಗ್ರಾ,ಮದ ನದಿ ತಟದಲ್ಲಿ ಸಂಸಾರ ಸಮೇತ ವಾಸವಾಗಿದ್ದು ಪ್ರತಿ ವರ್ಷದ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗುವ ಸಂದÀರ್ಭ ನೀರು ಇವರುಗಳ ಮನೆ ಸಮೀಪ ಬರುತಿತ್ತೆ ವಿನಃ ಮನೆಗೆ ಈವರೆಗೂ ಬಂದಿರಲಿಲ್ಲ. ಆದರೆ ಈ ವರ್ಷದ ಆಶ್ಲೇಷ ಮಳೆಗೆ ನದಿ ನೀರು ಮನೆಗ ಳನ್ನು ಸಂಪೂರ್ಣ ನೆಲ ಸಮಗೊಳಿ ಸಿದ್ದು ಮನೆಯೊಂದಿಗೆ ಮನೆಯ ಸಾಮಗ್ರಿಗಳು ನೀರು ಪಾಲಾಗಿವೆ.
ಪರಿಹಾರ ವಂಚಿತ ಕುಟುಂಬಗಳು: ಪ್ರವಾಹದಿಂದ ಈ ಮೂರು ಮನೆಗಳು ನೆಲಕಚ್ಚಿ ನಿರಾಶ್ರಿತರಾದ ಇವರುಗಳನ್ನು ಪರಿಹಾರ ಕೇಂದ್ರಗಳಿಗೆ ಕಳುಹಿಸುವ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ಮೇಲಿದ್ದರು ಗ್ರಾ.ಪಂ. ನಿರ್ಲಕ್ಷ್ಯದಿಂದ ಇವರು ಪರಿಹಾರ ಕೇಂದ್ರ ತಲಪಲಿಲ್ಲ. ನೀವು ಪರಿಹಾರ ಕೇಂದ್ರಕ್ಕೆ ಬರುವದು ಬೇಡವೆಂದ ಗ್ರಾ.ಪಂ. ಇಲ್ಲಿಯೆ ಸಮೀಪದ ಮಾಲೀಕರ ತೋಟದ ಮನೆಯಲ್ಲಿ ತಂಗಲು ತಿಳಿಸಿ ಎಲ್ಲಾ ವ್ಯವಸ್ಥೆಯನ್ನು ಮಾಡುವದಾಗಿ ಹೇಳಿದ ಮೇರೆಗೆ 3 ಸಾವಿರ ರೂಪಾಯಿ ಬಾಡಿಗೆ ನೀಡಿ ಲೈನ್ ಮನೆಯಲ್ಲಿ ತಂಗಿದರು. ಈಗ ಇವರುಗಳಿಗೆ ಸರ್ಕಾರ ನೀಡುವ 10 ಸಾವಿರ ರೂಪಾಯಿಗಳ ಹಣವಾಗಲಿ ಇತರೆ ಆಹಾರದ ಕಿಟ್ ಮುಂತಾದ ಪರಿಹಾರಗಳು ಇವರೆಗೂ ಇವರ ಕೈ ಸೇರಿಲ್ಲ. ಮನೆ ಕಳೆದುಕೊಂಡು ಪರಿಹಾರ ಕೇಂದ್ರ ಬಿಟ್ಟು ಬೇರೆ ಕಡೆ ನೆಲಸಿದವರಿಗೆ ಸರ್ಕಾರ ಬಾಡಿಗೆ ಹಣವಾಗಿ ತಿಂಗಳಿಗೆ 5 ಸಾವಿರ ರೂಪಾಯಿಗಳನ್ನು ನೀಡಲು ನಿರ್ಧರಿಸಿದ್ದು ಆ ಹಣವು ಇವರ ಕೈ ಸೇರಿಲ್ಲ. ಮುಂದೆ ಏನು ಮಾಡುವದು ಮನೆ ಬಾಡಿಗೆ ಹೇಗೆ ನೀಡುವದೆಂಬ ಚಿಂತೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಗ್ರಾ.ಪಂ.ನಿಂದ ಪಡಿತರ ಸಾಮಗ್ರಿ ಮಾತ್ರ ವಿತರಣೆ : ಗ್ರಾ.ಪಂ. ಸದಸ್ಯ ಸುಮೇಶ್‍ರವರ ಪ್ರಯತ್ನದಿಂದ ಗ್ರಾ.ಪಂ. ಅಧಿಕಾರಿಗಳು ಒಂದು ಬಾರಿ ಆಗಮಿಸಿ ಅಕ್ಕಿ ಮತ್ತು ಇಂತಿಷ್ಟು ಪಡಿತರ ಸಾಮಗ್ರಿ ನೀಡಿ ತೆರಳಿದ ನಂತರ ಇತ್ತ ತಿರುಗಿಯೆ ನೋಡಿಲ್ಲ ಎಂದು ಈ ಕುಟುಂಬದ ಸದಸ್ಯರುಗಳು ಆರೋಪಿಸುತ್ತಿದ್ದು ಸದಸ್ಯ ಸುಮೇಶ್ ಕೆಲವು ದಾನಿಗಳಿಂದ ಆಹಾರ ಸಾಮಗ್ರಿಗಳನ್ನು ನೀಡಿದ್ದರಿಂದ ನಮ್ಮ ಹೊಟ್ಟೆ ತುಂಬಿದೆ ನಾವು 3 ಕುಟುಂಬಗಳಿಂದ ಮಕ್ಕಳು, ಮರಿ ಮಕ್ಕಳು, ಮಹಿಳೆಯರು ಸೇರಿದಂತೆ 12 ಮಂದಿಯಿದ್ದು ಬಟ್ಟೆ ಸೇರಿದಂತೆ ನಮ್ಮ ಮನೆ ಸಾಮಗ್ರಿಗಳು ನೀರು ಪಾಲಾಗಿದ್ದು ಇಂದಿಗೂ ನಮಗೆ ಉಡಲು ಬಟ್ಟೆಯಿಲ್ಲ ನಾವು ಅದೇ ಬಟ್ಟೆಯಲ್ಲಿಯೆ ದಿನ ದೂಡುತ್ತಿರುವದಾಗಿ ಸಂತ್ರಸ್ತರು ದೂರುತ್ತಿದ್ದಾರೆ.
ದರ್ಪ ಮೆರೆದ ಪಿ.ಡಿ.ಓ. ಹೇಳಿಕೆ : ದಾಸವಾಳ ಗ್ರಾಮದ ನಿರಾಶ್ರಿತರ ಬಗ್ಗೆ ನಂಜರಾಯಪಟ್ಟಣ ಪಿ.ಡಿ.ಓ. ಕಲ್ಪರವರ ಬಳಿ ಮಾಹಿತಿ ಬಯಸಿ ದಾಗ ನಿರಾಶ್ರಿತರಿಗೆ ಯಾವದೇ ತೊಂದರೆ ಇಲ್ಲ ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ನಿರಾಶ್ರಿತರು ಸುಳ್ಳು ಹೇಳುತ್ತಿದ್ದಾರೆ ಅವರನ್ನು ಕರೆದುಕೊಂಡು ಬನ್ನಿ ಅವರಿಗೆ ಪರಿಹಾರ ನೀಡದ ಬಗ್ಗೆ ಕಂದಾಯ ಇಲಾಖೆಯನ್ನು ಕೇಳಿ ನನ್ನನ್ನು ಕೇಳಬೇಡಿ ಎಂದು ಮಾಧ್ಯಮದವರೊಂದಿಗೆ ದರ್ಪದಲ್ಲೆ ಉತ್ತರಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸಂತ್ರಸ್ತರ ನೆರವಿಗೆ ಅವಿರತವಾಗಿ ಶ್ರÀಮಿಸುತ್ತಿದ್ದು ಕೆಲವು ಅಧಿಕಾರಿಗಳ ನಿರ್ಲಕ್ಷ್ಯತನ ಪ್ರಾಮಾಣಿಕವಾಗಿ ದುಡಿಯುವ ಅಧಿಕಾರಿಗಳಿಗೆ ತಟ್ಟುತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕಿದೆ.