ಗೋಣಿಕೊಪ್ಪ ವರದಿ, ಆ. 28: ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಮಟ್ಟದ ಹಾಕಿ ಮತ್ತು ಕಾಲ್ಚೆಂಡು ಪಂದ್ಯಾಟದಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ತಂಡ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಈ ಪಂದ್ಯಗಳಲ್ಲಿ ಹಾಕಿ ಮತ್ತು ಕಾಲ್ಚೆಂಡು ಅಂತಿಮ ಪಂದ್ಯಗಳಲ್ಲಿ ಮಾಯಮುಡಿ ಶಾಲಾ ತಂಡ ಜಯಗಳಿಸಿ ತಾಲೂಕು ಮಟ್ಟಕ್ಕೆ ಪ್ರವೇಶ ಪಡೆಯಿತು.