ಮಡಿಕೇರಿ, ಆ. 28: ನ್ಯೂಜಿಲ್ಯಾಂಡ್‍ನಲ್ಲಿರುವ ಮಾಳೇಟಿರ ಪ್ರವೇಶ್ ಕಾರ್ಯಪ್ಪ 2018ರ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟಗೊಳಗಾಗಿರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಾಗುವಂತೆ ಐವರು ವಿದ್ಯಾರ್ಥಿಗಳಿಗೆ ರೂ. 25 ಸಾವಿರದಂತೆ ಒಟ್ಟು 1,25,000 ರೂಪಾಯಿ ನೆರವು ನೀಡಿದ್ದಾರೆ.

ಈ ಪೈಕಿ ಮೊದಲ ಕಂತನ್ನು ತಲಾ ರೂ. 10 ಸಾವಿರದಂತೆ ಚೆಕ್ಕನ್ನು ಕೊಡಗು ಇನ್ ನೀಡ್ ಫೌಂಡೇಶನ್‍ನ ಸರಳ ಸಮಾರಂಭದಲ್ಲಿ ಅಧ್ಯಕ್ಷೆ ಪೊಯ್ಯಟ್ಟಿರ ಭಾನುಮತಿ, ಉಪಾಧ್ಯಕ್ಷ ಮಾಳೇಟಿರ ಕರುಂಬಯ್ಯ ಮತ್ತು ಪೋಷಕರ ಸಮ್ಮುಖದಲ್ಲಿ ನೀಡಲಾಯಿತು.