ಗೋಣಿಕೊಪ್ಪ ವರದಿ, ಆ. 28: ಬಾಳೆಲೆ ಲಕ್ಷ್ಮಣತೀರ್ಥ ಹೊಳೆ ಪ್ರವಾಹದಿಂದ ಹೆಚ್ಚು ನಷ್ಟ ಅನುಭವಿಸಿರುವ 6 ಗ್ರಾಮ ಪಂಚಾಯಿತಿಯ ಕೃಷಿಕರನ್ನು ವಿಶೇಷವಾಗಿ ಪರಿಗಣಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಬಾಳೆಲೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪೊನ್ನಪ್ಪಸಂತೆ, ಬಾಳೆಲೆ, ನಿಟ್ಟೂರು, ಕಾನೂರು, ನಾಲ್ಕೇರಿ, ಕೆ. ಬಾಡಗ ಗ್ರಾಮ ಪಂಚಾಯಿತಿಯಲ್ಲಿ ಅಪಾರ ಬೆಳೆ ಪ್ರವಾಹದಲ್ಲಿ ನಾಶವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡುವಂತೆ ಬಾಳೆಲೆ ಕಂದಾಯ ಇಲಾಖೆ ಅಧಿಕಾರಿ ಹರೀಶ್ ಅವರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭ ಬಾಳೆಲೆ ಗ್ರಾ. ಪಂ. ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್ ಉಪಸ್ಥಿತರಿದ್ದರು.