ಮಡಿಕೇರಿ, ಆ. 28: ಅಲ್ಪಸಂಖ್ಯಾತರ ನಿರ್ದೇಶ ನಾಲಯ ವತಿಯಿಂದ 2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ನವೀಕರಣ/ಹೊಸ ಅರ್ಜಿ ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (1 ರಿಂದ 10ನೇ ತರಗತಿ)/ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ(ಪಿಯುಸಿಯಿಂದ ಪಿಎಚ್ಡಿ) ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ hಣಣಠಿ://ತಿತಿತಿ.sಛಿhoಟಚಿಡಿshiಠಿs.gov.iಟಿ ಮೂಲಕ ಅರ್ಜಿ ಸಲ್ಲಿಸುವದು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನ. ಮೆಟ್ರಿಕ್ ನಂತರ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನ.
ಅರ್ಜಿಯೊಂದಿಗೆ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿ (ಶೇ. 50 ರ ಮೇಲ್ಪಟ್ಟು) ಪ್ರಸಕ್ತ ವರ್ಷದ (2019-20) ಶುಲ್ಕ ರಶೀತಿ, ವಿದ್ಯಾರ್ಥಿಯ ಭಾವಚಿತ್ರ, ವಿದ್ಯಾರ್ಥಿಯ ಬ್ಯಾಂಕ್ ಖಾತೆ ಸಂಖ್ಯೆ ಪಾಸ್ ಪುಸ್ತಕ ನಕಲು ಪ್ರತಿ ಹಾಗೂ ಆಧಾರ್ ಕಾರ್ಡ್.
ಹಿಂದಿನ ವರ್ಷದಲ್ಲಿ ಕನಿಷ್ಟ ಶೇ. 50 ಕ್ಕಿಂತ ಹೆಚ್ಚಿನ ಅಂಕದಲ್ಲಿ ಉತ್ತೀರ್ಣರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಗರಿಷ್ಠ ರೂ. 1 ಲಕ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ರೂ. 2 ಲಕ್ಷ, ಮೆಟ್ರಿಕ್ ನಂತರದ ಹಾಗೂ ರೂ. 2.50 ಲಕ್ಷ ವಿದ್ಯಾರ್ಥಿ ವೇತನಕ್ಕೆ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ರಾಜ್ಯದವರಾಗಿದ್ದು, ಅಲ್ಪಸಂಖ್ಯಾತರ ಸಮುದಾಯದವರಾಗಿರಬೇಕು.
ಮೆಟ್ರಿಕ್ ಪೂರ್ವ ಅರ್ಜಿಗಳ ಒಂದು ಪ್ರತಿಯನ್ನು ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ ಆಯಾಯ ಶಾಲೆಗೆ ಸಲ್ಲಿಸುವದು ಹಾಗೂ ಮೆಟ್ರಿಕ್ ನಂತರ ಮತ್ತು ಮೆರಿಟ್ ಕಂ ಮೀನ್ಸ್ ಅರ್ಜಿಗಳ ಒಂದು ಪ್ರತಿ ಆಯಾಯ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಕಾಲೇಜು ಇರುವ ತಾಲೂಕು ಮಾಹಿತಿ ಕೇಂದ್ರಗಳಿಗೆ ಸಲ್ಲಿಸುವದು.
ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್ಸೈಟ್ hಣಣಠಿs://goಞಜom.ಞಚಿಡಿ.ಟಿiಛಿ.iಟಿ ನ್ನು ಹಾಗೂ ದೂ. 08272-225528/ 220214 ನ್ನು ಸಂಪರ್ಕಿಸ ಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹೆಚ್. ಡಿ. ಪುಟ್ಟರಾಜು ತಿಳಿಸಿದ್ದಾರೆ.