ಗೋಣಿಕೊಪ್ಪಲು, ಆ. 28: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗೆ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಪೀಠೋಪಕರಣ ನೀಡುವ ಮೂಲಕ ಶಾಲಾ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಲಾಯಿತು. ದ. ಕೊಡಗಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೀಠೋಪಕರಣ ಅವಶ್ಯಕತೆಯಿರುವ ಬಗ್ಗೆ ಮನಗಂಡ ಗೋಣಿಕೊಪ್ಪ ರೋಟರಿ ಕ್ಲಬ್ ಸ್ಥಳೀಯ ದಾನಿಗಳು ರೋಟರಿಯ ಮಾಜಿ ಜೆಡ್‍ಎಲ್ ರೋಟರಿಯನ್ ಪೊಕ್ಕಳಿಚಂಡ ಪೂಣಚ್ಚ ಅವರ ಮೂಲಕ ಕೊಡುಗೆಯಾಗಿ ಈ ಶಾಲೆಗೆ ಪೀಠೋಪಕರಣ ವಿತರಿಸಿದರು.

ಶಾಲೆಯ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನವೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ ರೋಟರಿ ಸಂಸ್ಥೆ ನೀಡಿರುವ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ಕಲಿಕಾಮಟ್ಟವನ್ನು ಹೆಚ್ಚಿಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದು ರೋಟೆರಿಯನ್ ರೀಟಾ ದೇಚಮ್ಮ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್‍ನ ಕಾರ್ಯದರ್ಶಿ ತಾಣಚ್ಚಿರ ಪೂಣಚ್ಚ, ಖಜಾಂಚಿ ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಡಾ. ಕೆ.ಪಿ. ಚಿಣ್ಣಪ್ಪ, ಡಾ. ಆಶಿಕ್ ಚಂಗಪ್ಪ, ಟಿ.ಎನ್. ನರೇಂದ್ರ, ರೀಟಾ ದೇಚಮ್ಮ, ಕುಮಾರಿ ಶುಭಾಶ್, ಶುಭಾಷಿಣಿ, ಜೆ. ಕುಮಾರ್, ಸುಷ್ಮಾ ಚಂಗಪ್ಪ, ರಾಜೇಶ್ವರಿ ನರೇಂದ್ರ, ನಿಮ್ಮಿ ಉತ್ತಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ, ಸಹ ಶಿಕ್ಷಕಿ ಸುಮಾ, ಪಂಚಾಯಿತಿ ಸದಸ್ಯ ವಿಶ್ವನಾಥ್, ಎಸ್‍ಡಿಎಂಸಿ ಅಧ್ಯಕ್ಷೆ ಭವ್ಯ, ಸ್ಥಳೀಯ ಮುಖಂಡ ಸುಬ್ಬು ಸೇರಿದಂತೆ ಇನ್ನಿತರರು ಕಾರ್ಯಕ್ರದಲ್ಲಿ ಭಾಗಿಯಾಗಿದ್ದರು.

-ಹೆಚ್.ಕೆ. ಜಗದೀಶ್