ವೀರಾಜಪೇಟೆ, ಆ. 28: ಗೌರಿ ಗಣೇಶೋತ್ಸವದ ಅಂಗವಾಗಿ ಸೆ.1ರಂದು ಇಲ್ಲಿನ ಜೈನರ ಬೀದಿಯ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯಿಂದ ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ಗೌರಮ್ಮನ ಪಲ್ಲಕ್ಕಿ ಉತ್ಸವ ಮೆರವಣಿಗೆ ಏರ್ಪಡಿಸಲಾಗಿದೆ.

ಗೌರಮ್ಮನವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಬೆಳಿಗ್ಗೆ ಸಿದ್ದಾಪುರ ರಸ್ತೆಯಿಂದ ಹೊರಟು ತೆಲುಗರಬೀದಿ, ಮೊಗರಗಲ್ಲಿಯವರೆಗೆ ತಲಪಿ ಹಿಂತಿರುಗಿ ಮುಖ್ಯ ಬೀದಿಗಳ ಮೂಲಕ ವಾಪಾಸಾಗಿ, ಮೂರ್ನಾಡು ರಸ್ತೆ ದೇವರಕಾಡು ರಸ್ತೆ, ಅಪ್ಪಯ್ಯ ಸ್ವಾಮಿ ಮಾರ್ಗವಾಗಿ ದೇವಸ್ಥಾನವನ್ನು ತಲಪಿ ನಂತರ ಗೌರಮ್ಮನ ಪ್ರತಿಷ್ಠಾಪನೆ ಪೂಜಾ ಸೇವೆ ನಡೆಯಲಿದೆ.