ವೀರಾಜಪೇಟೆ, ಆ. 27: ವೀರಾಜ ಪೇಟೆ ತಾಲೂಕು ಪಂಚಾಯಿತಿಯ ಅಧೀನದ 24 ಇಲಾಖೆಗಳ ನೌಕರರಿಗೆ ಮೂರು ತಿಂಗಳುಗಳಿಂದ ವೇತನ ಪಾವತಿಯಾಗಿರುವದಿಲ್ಲ. ಅನುದಾನಗಳನ್ನು ಬಿಡುಗಡೆ ಮಾಡಲು ಇಂದು ಡಿ.ಎಸ್.ಸಿಯ ಅಗತ್ಯವಿದ್ದು ಇದು ಸದÀ್ಯದಲ್ಲಿಯೇ ಹಣಕಾಸು ಗಣಕಜಾಲ ನಿರ್ವಹಣಾ ಕೇಂದ್ರದಿಂದ ಬರಲಿದ್ದು ಎಲ್ಲಾ ಇಲಾಖೆಯ ನೌಕರರಿಗೆ ವಿಳಂಬವಿಲ್ಲದೆ ವೇತನ ಪಾವತಿಸಲಾಗುವದು. ಸರಕಾರದ ಹೊಸ ನಿಯಮದ ಪ್ರಕಾರ ಎಲ್ಲ ಅನುದಾನಗಳು ಖಜಾನೆ-1 ಖಜಾನೆ-2ರ ತಂತ್ರಾಂಶದ ಮೂಲಕ ಬಿಡುಗಡೆಯಾಗುತ್ತಿವೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ವೀರಾಜಪೇಟೆ, ಆ. 27: ವೀರಾಜ ಪೇಟೆ ತಾಲೂಕು ಪಂಚಾಯಿತಿಯ ಅಧೀನದ 24 ಇಲಾಖೆಗಳ ನೌಕರರಿಗೆ ಮೂರು ತಿಂಗಳುಗಳಿಂದ ವೇತನ ಪಾವತಿಯಾಗಿರುವದಿಲ್ಲ. ಅನುದಾನಗಳನ್ನು ಬಿಡುಗಡೆ ಮಾಡಲು ಇಂದು ಡಿ.ಎಸ್.ಸಿಯ ಅಗತ್ಯವಿದ್ದು ಇದು ಸದÀ್ಯದಲ್ಲಿಯೇ ಹಣಕಾಸು ಗಣಕಜಾಲ ನಿರ್ವಹಣಾ ಕೇಂದ್ರದಿಂದ ಬರಲಿದ್ದು ಎಲ್ಲಾ ಇಲಾಖೆಯ ನೌಕರರಿಗೆ ವಿಳಂಬವಿಲ್ಲದೆ ವೇತನ ಪಾವತಿಸಲಾಗುವದು. ಸರಕಾರದ ಹೊಸ ನಿಯಮದ ಪ್ರಕಾರ ಎಲ್ಲ ಅನುದಾನಗಳು ಖಜಾನೆ-1 ಖಜಾನೆ-2ರ ತಂತ್ರಾಂಶದ ಮೂಲಕ ಬಿಡುಗಡೆಯಾಗುತ್ತಿವೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ವಿಳಂಬವಾಗಲು ಕಾರಣವಾಗಿದೆ. ಖಜಾನೆ-2 ತಂತ್ರಾಂಶದಡಿ ನೋಂದಣಿ ಮಾಡಿಸಿ ತಂತ್ರಾಂಶದಡಿ ಕಾರ್ಯ ನಿರ್ವಹಿಸಲು ಬೇಕಾದ ಡಿ.ಎಸ್.ಸಿ. ಯನ್ನು ತುರ್ತಾಗಿ ನೀಡಲು ಪೊನ್ನಂಪೇಟೆ ಖಜಾನೆಯ ಮೂಲಕ ಬೆಂಗಳೂರಿನ ಖನಿಜಭವನದಲ್ಲಿರುವ ಖಜಾನೆ-2 ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗಿದೆ ಎಂದರು.

ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಇ. ಸುರೇಂದ್ರ ಮಾತನಾಡಿ ಎಲ್ಲ ಶಿಕ್ಷಕರಿಗೂ ಇತರ ಸರಕಾರಿ ನೌಕರರಂತೆ ಸದ್ಯದಲ್ಲಿಯೇ ವೇತನ ಪಾವತಿ ಯಾಗಲಿದೆ. ವೀರಾಜಪೇಟೆ ತಾಲೂಕು ಸೇರಿದಂತೆ ಕೊಡಗಿನಲ್ಲಿ ಈಚೆಗೆ ಜಲಪ್ರಳಯ ಉಂಟಾದ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ನೌಕರರು ಒಂದು ದಿನದ ವೇತನವನ್ನು ಸಂತ್ರಸ್ತರ ನಿಧಿಗೆ ಪಾವತಿಸುವಂತೆ ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲ ಸರಕಾರಿ ನೌಕರರು ಸಹಕರಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಖಜಾಂಚಿ ಎ.ಬಿ. ಲಲಿತ, ನಿರ್ದೇಶಕಿ ಭಾಗ್ಯಲಕ್ಷ್ಮಿ, ಹೆಚ್.ಜಿ. ಸೀತಾ, ಜಿಲ್ಲಾ ಸಮಿತಿಯ ಬಿ.ಟಿ. ದೇವರಾಜು ಉಪಸ್ಥಿತರಿದ್ದರು.