ನಾಪೋಕ್ಲು, ಆ. 27: ಕಾಂಞಂಗಾಡಿನ ಎಸ್‍ವೈಎಸ್ ವಲಯದ ವತಿಯಿಂದ ಎಮ್ಮೆಮಾಡು ನಿವಾಸಿ ಬಾಣಪೊರೆ ಸಯ್ಯದ್ ಕೋಯಮ್ಮ ತಂಙಳ್ ಅವರಿಗೆ ನಿರ್ಮಿಸಿಕೊಡುವ ದಾರುಲ್ ಖೈರ್ ಮನೆಯ ಶಂಕುಸ್ಥಾಪನೆಯನ್ನು ಸಯ್ಯದ್ ಜಾಫರ್ ತಂಙಳ್ ಮಾಣಿಕೋತ್ ಅಜರ್ ತಂಙಳ್ ನೆರವೇರಿಸಿದರು.
ಸತ್ತಾರ್ ಕಾಂಞಂಗಾಡ್ ನೌಷದ್ ಇತಲ, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಖಾದರ್ ಹಾಜಿ ಎಮ್ಮೆಮಾಡು ಎಸ್‍ವೈಎಸ್ ಅಧ್ಯಕ್ಷ ಕಾದರ್ ಸಾದಿ, ಸಯ್ಯದ್ ಸೈಫುದ್ದೀನ್ ತಂಙಳ್, ಕೊಡಗು ಜಿಲ್ಲಾ ಸಮಿತಿ ಎಸ್‍ಎಸ್‍ಎಫ್ ಸದಸ್ಯ ಸೌಕತ್, ಕೆಸಿಎಫ್ ಓಮನ್ ಅಧ್ಯಕ್ಷ ಸಯ್ಯದ್ ಅಬಿತಂಙಳ್ ಹಾಜರಿದ್ದರು.